ಕೇರಳದಲ್ಲಿ ಕೊರೊನಾ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಸಂಪೂರ್ಣ ಲಾಕ್ ಡೌನ್ ಬೇಕಾ ಬೇಡವಾ ಎಂಬ ಚರ್ಚೆಗಳು ವ್ಯಾಪಕವಾಗಿವೆ. ಇದರ ನಡುವೆಯೇ ಈ ಬಗ್ಗೆ ತೀರ್ಮಾನಿಸಲು ಕೇರಳ ಸಂಪುಟದ ವಿಶೇಷ ಸಭೆ ನಡೆಸಿದ್ದು, ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ನಿರಂತರ ಹೆಚ್ಚುತ್ತಿರುವ ಹೊರತಾಗಿಯೂ ಸಂಪೂರ್ಣ ಲಾಕ್ಡೌನ್ ಮಾಡದಿರಲು ಕೇರಳ ಸಂಪುಟ ನಿರ್ಧಾರ ಮಾಡಿದೆ. ಸರ್ವಪಕ್ಷಗಳ ಸಭೆಯಲ್ಲಿ ಲಾಕ್‌ಡೌನ್‌ಗೆ ಬೆಂಬಲ ವ್ಯಕ್ತವಾಗಿರಲಿಲ್ಲ. ಇದಾದ ಮೂರು ದಿನಗಳ ಬಳಿಕ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಲಾಕ್ಡೌನ್ ಬದಲು ಸರಕಾರ ರಾಜ್ಯದ ತೀವ್ರ ಬಾಧಿತ ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಕ್ರಮಗಳನ್ನು ಬಲಗೊಳಿಸುವ ಕ್ರಮಕ್ಕೆ ಮುಂದಾಗಿದೆ. ಇನ್ನೂ ಡೇಂಜರ್ ಝೋನ್‍ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ.
ಹಬ್ಬದ ಸೀಸನ್‌ಗೆ ‘ರಿಯಲ್‌ಮಿ’ ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ
ಬೆಂಗಳೂರು: ದೀಪಾವಳಿ ಮತ್ತು ಹಬ್ಬದ ಸೀಸನ್ ಶುರುವಾಗಿದ್ದು ಸ್ಮಾರ್ಟ್‌ಫೋನ್ ಪ್ರಿಯರಿಗೆ ಭಾರತದ ಜನಪ್ರಿಯ ಬ್ರ್ಯಾಂಡ್ ರಿಯಲ್‌ಮಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ನೀವು ಹೊಸದಾಗಿ ರಿಯಲ್‌ಮಿ 16 ಸರಣಿಯ...








