ಫೋನ್ ನಲ್ಲಿ ಕಳೆದು ಹೋಗಿ 2 ಬಾರಿ ಮಹಿಳೆಗೆ ಲಸಿಕೆ ನೀಡಿದ ನರ್ಸ್ – ಕ್ಷಮೆ ಕೇಳುವ ಬದಲು ಕೂಗಾಡಿದ ನರ್ಸ್..!
ಉತ್ತರ ಪ್ರದೇಶ : ಫೋನ್ ನಲ್ಲೇ ಮುಳುಗಿಹೋಗಗಿದ್ದ ನರ್ಸ್ ಒಬ್ಬರು ಎರೆಡೆರೆಡು ಬಾರಿ ಮಹಿಳೆಗೆ 2 ಡೋಸ್ ಕೋವಿಡ್ 19ಲಸಿಕೆ ನೀಡಿರೋ ಗಟನೆ ಉತ್ತರಪ್ರದೇಶದ ಕಾನ್ಪುರದ ಅಕ್ಬರಪುರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಲಸಿಕೆ ನೀಡುವಾಗ ಫೋನ್ ನಲ್ಲಿಯೇ ಮುಗಳುಗಿ ಹೋಗಿದ್ದ ನರ್ಸ್ ಇಂತಹದೊಂದು ಎಡವಟ್ಟು ಮಾಡಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇತ್ತ ಡೋಸ್ ಪಡೆದ ಮಹಿಳೆಯ ಕುಟುಂಬದ ಸದಸ್ಯರು ಕೇಂದ್ರದಲ್ಲಿ ಗಲಾಟೆ ಮಾಡಿದ್ದಾರೆ.
50 ವರ್ಷದ ಮಹಿಳೆ ಕಮಲೇಶ್ ಕುಮಾರಿ ಅವರಿಗೆ ಎರಡು ಬಾರಿ ಲಸಿಕೆ ನೀಡಲಾಗಿದೆ. ಆದ್ರೆ ಈ ಬಗ್ಗೆ ಪ್ರಶ್ನಿಸಿದ ಬಳಿಕ ಕ್ಷಮೆಯಾಚಿಸುವ ಬದಲು ನರ್ಸ್ ಅರ್ಚನಾ ಕೂಗಾಡಿದ್ದಾಳೆ ಎನ್ನಲಾಗಿದೆ. ಇದ್ರಿಂದಾಗಿ ಪರಿವಾರದವರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ. ಎರಡು ಬಾರಿ ಲಸಿಕೆ ನೀಡಿದ್ದರಿಂದ ಕೈಯಲ್ಲಿ ಊತ ಕಾಣಿಸಿದೆ ಎಂದು ಮಹಿಳೆ ಸಂಬಂಧಿಕರು ಆರೋಪಿಸಿ ನರ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಜಿಲ್ಲಾಧಿಕಾರಿ, ಮುಖ್ಯ ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ಅವರ ಬಳಿ ಕುಟುಂಬಸ್ಥರು ದೂರು ನೀಡಿದ್ದಾರೆ. ನರ್ಸ್ ವಿರುದ್ಧ ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಜಿಲ್ಲಾಧಿಖಾರಿ ಜಿತೇಂದ್ರ ಪ್ರತಾಪ್ ಸಿಂಗ್ ಅವರು, ತನಿಖೆ ನಡೆಸಿ ಕೂಡಲೇ ವರದಿ ಸಲ್ಲಿಸಲು ಮುಖ್ಯ ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
1 ಲಕ್ಷದತ್ತ ದಾಪುಗಾಲಿಟ್ಟ ದೈನಂದಿನ ಕೊರೊನಾ ಕೇಸಸ್ , ಅಮೆರಿಕಾವನ್ನು ಹಿಂದಿಟ್ಟ ಭಾರತ..!
ಕೆ.ಮಂಜು ಯಾರು ಅಂತಾನೆ ಗೊತ್ತಿಲ್ಲ : ಸುಧಾಕರ್ ಟಾಂಗ್
ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಗೂ ಕೊರೊನಾ ಪಾಸಿಟಿವ್..!
ಪಾಷಾಣವಾಯ್ತು ಕಲ್ಲಂಗಡಿ | ಹೈದರಾಬಾದ್ ನಲ್ಲಿ ಇಬ್ಬರು ಸಾವು
ಲೈಂಗಿಕ ಕಿರುಕುಳ : ವಿಧಾನಸಭಾ ಚುನಾವಣೆಯಿಂದ ಹೊರನಡೆದ ಕೇರಳದ ಮೊದಲ “ಮಂಗಳಮುಖಿ” ಅಭ್ಯರ್ಥಿ