ರಾಜ್ಯಾದಲ್ಲಿ ಮತ್ತೆ ಲಾಕ್ ಡೌನ್ ಸುಳಿವು ನೀಡಿದ್ರಾ ಸಿಎಂ..!

1 min read
b s yediyurappa

ರಾಜ್ಯಾದಲ್ಲಿ ಮತ್ತೆ ಲಾಕ್ ಡೌನ್ ಸುಳಿವು ನೀಡಿದ್ರಾ ಸಿಎಂ..!

ತುಮಕೂರು : ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾದ ಬೆನ್ನಲ್ಲೇ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ಇದೀಗ ಸಿಎಂ ಯಡಿಯೂರಪ್ಪ ಅವರು ಮತ್ತೆ ರಾಜ್ಯದಲ್ಲಿ ಲಾಕ್  ಡೌನ್ ಆಗಬಹುದು ಎಂಬ ಸುಳಿವು ನೀಡಿದ್ದಾರೆ.

ಹೌದು ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್‍ಡೌನ್ ಹಾಗೂ ರಾತ್ರಿ ಕಫ್ರ್ಯೂ ವಿಧಿಸುವುದು ಸೇರಿದಂತೆ ಇತರೇ ಕ್ರಮಗಳ ಬಗ್ಗೆ  ಒಂದು ವಾರದೊಳಗೆ ನಿರ್ಧಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿರುವ ಅವರು  ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಲಾಕ್‍ಡೌನ್ ಜಾರಿ ಇಲ್ಲವೆ ರಾತ್ರಿ ಕಫ್ರ್ಯೂ ವಿಧಿಸುವ ಕುರಿತಾಗಿ ತಜ್ಞರ ಅಭಿಪ್ರಾಯ ಪಡೆದು ತೀರ್ಮಾನಿಸುವುದಾಗಿ ತಿಳಿಸಿದರು.

ನಾನು ಈಗಲೂ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪ್ರತಿಯೊಬ್ಬರೂ ದಯವಿಟ್ಟು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಸೇರಿದಂತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.

ನಾನು ಈಗಲೂ ಕೂಡ ಲಾಕ್‍ಡೌನ್ ಜಾರಿಮಾಡಬೇಕೆಂಬ ಚಿಂತನೆಯಲ್ಲಿಲ್ಲ. ಆದರೆ, ಪರಿಸ್ಥಿತಿ ಕೈ ಮೀರಿದರೆ ಏನೂ ಮಾಡಲು ಸಾಧ್ಯವಿಲ್ಲ. ನೆರೆಯ ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ನಾವು ಕೂಡ ಅಧ್ಯಯನ ಮಾಡುತ್ತಿದ್ದೇವೆ ಎಂದರು. ಈ ಮೂಲಕ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಆಗಬಹುದೆಂಬ ಸುಳಿವು ಕೊಟ್ರು.

ಉಪ್ಪಿಗೆ ನಾಯಕಿಯಾಗಲಿದ್ದಾರೆ ಕ್ಯೂಟ್ ಬ್ಯೂಟಿ ಹರಿಪ್ರಿಯಾ..!

BIGGBOSS 8 : ಬೆಸ್ಟ್ ಪರ್ಫಾರ್ಮರ್ ಆಫ್ ದ ವೀಕ್ ಟೈಟಲ್ ಪಡೆದ ವಿಶ್ವನಾಥ್..!

ಬೈ ಎಲೆಕ್ಷನ್ : ಸತೀಶ್ ಜಾರಕಿಹೊಳಿಗೆ ಬೆಳಗಾವಿ ಟಿಕೆಟ್ ಪಕ್ಕಾ..!!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd