ಪಾಕಿಸ್ತಾನ : ಹೆಣ್ಣುಮಕ್ಕಳ ಮನೆಗೆ ಬೆಂಕಿ ಇಟ್ಟ ತಂದೆ – 7 ಮಂದಿ ಸಜೀವ ದಹನ
ಪಾಕಿಸ್ತಾನ : ಪಾಕಿಸ್ತಾನದಲ್ಲೊಂದು ಮರ್ಯಾದಾ ಹತ್ಯೆ ನಡೆದಿದೆ. ತಂದೆಯೇ ಹೆಣ್ಣುಮಕ್ಕಳ ಮನೆಗೆ ಬೆಂಕಿಯಿಟ್ಟಿದ್ದು, ದುರ್ಘಟನೆಯಲ್ಲಿ 4 ಮಕ್ಕಳು ಸೇರಿದಂತೆ 7 ಮಂದಿ ಸಜೀವ ದಹನರಾಗಿದ್ದಾರೆ. ಹೌದು ತಂದೆಯು ತನ್ನ ಹೆಣ್ಣುಮಕ್ಕಳ ಮನೆಗೆ ಬೆಂಕಿ ಹಚ್ಚಿದ್ದಾರೆ. ಮಕ್ಕಳ ಪೈಕಿ ಒಬ್ಬ ಮಗಳು ತಂದೆಯ ಇಚ್ಛಗೆ ವಿರುದ್ಧವಾಗಿ ಮದುವೆಯಾಗಿದ್ದ ಕಾರಣಕ್ಕೆ ತಂದೆ ಮರ್ಯಾದಾ ಹತ್ಯೆ ಮಾಡಿದ್ದಾರೆ. ಮಧ್ಯ ಪಾಕಿಸ್ತಾನದ ಮುಜಾಫರ್ ಘಡ್ ಜಿಲ್ಲೆಯ ಪೀರ್ ಜಹಾನಿಯನ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಮನೆಗೆ ಹಚ್ಚಲಾಗಿದ್ದು, ದುರ್ಘಟನೆಯಲ್ಲಿ 7 ಮಂದಿ ಸಜೀವ ದಹನವಾಗಿದ್ದಾರೆ. ತನ್ನ ಮಗಳ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಆರೋಪಿ ಮಂಜೂರ್ ಹುಸೇನ್ ನನ್ನು ಪೊಲೀಸರು ಈಗ ಹುಡುಕುತ್ತಿದ್ದಾರೆ. ಇನ್ನೂ ಬೆಂಕಿ ಹಚ್ಚಿದ ಮನೆಯಲ್ಲಿ ಆತನ ಇಬ್ಬರು ಹೆಣ್ಣುಮಕ್ಕಳಾದ ಫೌಜಿಯಾ ಬೀಬಿ ಮತ್ತು ಖುರ್ಷಿದ್ ಮೈ ಇದ್ದರು ಎನ್ನಲಾಗಿದೆ.
ಫೌಜಿಯಾ ಬೀಬಿ, ಖುರ್ಷಿದ್ ಮೈ ಘಟನೆಯಲ್ಲಿ ಸಾವನಪ್ಪಿದ್ದಾರೆ. ಇನ್ನೂ ಫೌಜಿಯಾ ಬೀಬಿಯ 4 ತಿಂಗಳ ಮಗ , ಖುರ್ಷಿದ್ ಮೈಯ ಮೂವರೂ ಮಕ್ಕಳೂ ಕೂಡ ಮೃತಪಟ್ಟಿದ್ದಾರೆ. ಅಷಷ್ಟೇ ಅಲ್ಲ ಘಟನೆಯಲ್ಲಿ ಖುರ್ಷಿದ್ ಮೈ ಪತಿ ಕೂಡ ಸಜೀವ ದಹಹನವಾಗಿದ್ದಾರೆ. ಬೀಬಿಯ ಪತಿ ಮೆಹಬೂಬ್ ಅಹ್ಮದ್ ಅವರು ಘಟನೆಯ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮರುದಿನ ಮುಂಜಾನೆ ಕೆಲಸದಿಂದ ಮನೆಗೆ ಮರಳಿದಾಗ ಆಘಾತಕ್ಕೆ ಒಳಗಾಗಿದ್ದಾರೆ. ಬಳಿಕ ಪೊಲೀಸರ ಬಳಿಗೆ ತೆರಳಿ ಪತ್ನಿಯ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಅಹ್ಮದ್ ತನ್ನ ಮಾವ ಮಂಜೂರ್ ಹುಸೇನ್ ಇಚ್ಛೆಗೆ ವಿರುದ್ಧವಾಗಿ 18 ತಿಂಗಳ ಹಿಂದೆ ಫೌಜಿಯಾ ಬೀಬಿಯನ್ನು ಮದುವೆಯಾಗಿದ್ದರು. ಇದರಿಂದ ಕುಪಿತಗೊಂಡ ಮಂಜೂರು ಹುಸೇನ್ ತನ್ನ ಮಗಳ ಮದುವೆಗೆ ಸೇಡು ತೀರಿಸಿಕೊಳ್ಳಲು ಬೆಂಕಿ ಹಾಕಿದ್ದಾಗಿ ಬೀಬಿ ಪತಿ ಅಹ್ಮದ್ ಆರೋಪಿಸಿದ್ದಾರೆ. ಬೀಬಿ ಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮಂಜೂರು ಹುಸೇನ್ ಮತ್ತು ಮಾವ ಮತ್ತು ಸೋದರ ಮಾವ ಸಾಬೀರ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.