ಆ ಪಾತ್ರಕ್ಕಾಗಿ ಫಸ್ಟ್ ಚಾಯ್ಸ್ ಐಶ್ವರ್ಯರಾಯ್ ಅಲ್ಲ
ನಿರ್ದೇಶಕ ಮಣಿರತ್ನಂ ಅವರ ಡ್ರೀಮ್ ಪ್ರಾಜೆಕ್ಟ್ ಪೊನ್ನಿಯನ್ ಸೆಲ್ವನ್. ಲೈಕಾ ಪ್ರೊಡೆಕ್ಷನ್ಸ್, ಮದ್ರಾಸ್ ಟಾಕಿಸ್ ಸಂಸ್ಥೆಗಳು ಸಂಯುಕ್ತವಾಗಿ ಈ ಭಾರಿ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿವೆ. ಈ ಸಿನಿಮಾವನ್ನು ಎರಡು ಭಾಗಗಳಾಗಿ ತೆಗೆಯುತ್ತಿದ್ದಾರೆ.
ಈ ನಡುವೆ ಮೊದಲ ಭಾಗದ ಸಿನಿಮಾದ ಶೂಟಿಂಗ್ ರಿಲೀಸ್ ಸಿದ್ಧವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಮತ್ತೊಂದು ಕಡೆ ಸಿನಿಮಾ ಪ್ರಚಾರದ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಸೆಪ್ಟೆಂಬರ್ 30 ರಂದು ತೆಲುಗು, ಹಿಂದಿ,ತಮಿಳು, ಕನ್ನಡ, ಮಳಯಾಲಂ ಭಾಷೆಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ.
ಆದ್ರೆ ಇತ್ತಿಚೆಗೆ ನಡೆದ ಒಂದು ಸಂದರ್ಶನದಲ್ಲಿ ಐಶ್ವರ್ಯ ರಾಯ್ ಪಾತ್ರಕ್ಕಾಗಿ ನೀವು ಯಾರನ್ನಾದ್ರೂ ಆಯ್ಕೆ ಮಾಡಬೇಕು ಎಂದುಕೊಂಡಿದ್ರಾ ಎಂದು ಆಂಕರ್ ಪ್ರಶ್ನೆ ಕೇಳಿದ್ರು. ಇದಕ್ಕೆ ಮಣಿರತ್ನಂ ಸ್ಪಂದಿಸಿ, ಆ ಪಾತ್ರಕ್ಕಾಗಿ ಆಗ ರೇಖಾ ಅವರನ್ನು ಆಯ್ಕೆ ಮಾಡಬೇಕು ಎಂದುಕೊಂಡಿದ್ದೆ ಎಂದು ತಮ್ಮ ಮನಸಿನಲ್ಲಿನ ಮಾತನ್ನು ಹೇಳಿದ್ದಾರೆ. ಮೊದಲ ಬಾರಿ ಕಮಲ್ ಹಾಸನ್ ಜೊತೆ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ ಎಂದು ಕೂಡ ಹೇಳಿದ್ದಾರೆ.
1994, 2011 ರಲ್ಲಿ ಈ ಸಿನಿಮಾವನ್ನು ಮಾಡಬೇಕು ಎಂದು ಪ್ರಯತ್ನಿಸಿದ್ದು, ಪ್ರಾಜೆಕ್ಟ್ ಟೇಕಾಫ್ ಆಗಲಿಲ್ಲ ಎಂದು ವಿವರಿಸಿದ್ದಾರೆ. ಅಲ್ಲದೆ ಪೊನ್ನಿಯನ್ ಸೆಲ್ವನ್ 1 ರಲ್ಲಿ ಐಶ್ವರ್ಯ ರಾಯ್ ದ್ವಿಪಾತ್ರಾಭಿನಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಜುಲೈನಲ್ಲಿ ಐಶ್ವರ್ಯ ಪಾತ್ರಕ್ಕೆ ಸಂಬಂಧಿಸಿದಂತೆ ಫಸ್ಟ್ ಲುಕ್ ಪೋಸ್ಟರನ್ನು ಚಿತ್ರತಂಡ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿನ ಯುದ್ಧ ಸನ್ನಿವೇಶಗಳನ್ನು ಥಾಯ್ ಲಾಂಡ್ ನಲ್ಲಿ ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಷಾ, ಶೋಭಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.