ದಸರಾ ಮಹೋತ್ಸವಕ್ಕೆ 14 ಆನೆಗಳ ಸಂಭಾವ್ಯ ಪಟ್ಟಿ ಸಿದ್ಧ
ಮೈಸೂರು : ವಿಶ್ವ ವಿಖ್ಯಾತಸ ದಸರಾ ಮಹೋತ್ಸವ ಅಂದ್ರೆ ನೆನಪಿಗೆ ಬರೋದು ಜಂಭೂ ಸವಾರಿ.
ನಾಡದೇವತೆ ಚಾಮುಂಡಿಯನ್ನು ಅಂಬಾರಿಯಲ್ಲಿರಿಸಿ ಅಂಬಾರಿಯನ್ನು ಹೊತ್ತು ರಾಜಗಾಂಭಿರ್ಯದಿಂದ ರಾಜ ಬೀದಿಯಲ್ಲಿ ಆನೆಗಳು ಹೆಜ್ಜೆ ಹಾಕುವುದನ್ನು ನೋಡಲು ಜನಸಾಗರೇ ಹರಿದುಬರುತ್ತದೆ.
ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ದಸರಾ ಸರಳವಾಗಿ ಆಚರಣೆ ಮಾಡಲಾಗಿತ್ತು.
ಇನ್ನು ಈ ಬಾರಿಯ ದಸರೆ ಅಕ್ಟೋಬರ್ 7ರಿಂದ 15ವರೆಗೆ ನಡೆಯಲಿದ್ದು, ಪೂರ್ವಸಿದ್ಧತೆ ಸಭೆ ನಡೆದಿಲ್ಲ.
ಆದ್ರೆ ದಸರಾ ಮಹೋತ್ಸವಕ್ಕೆ 14 ಆನೆಗಳ ಸಂಭಾವ್ಯ ಪಟ್ಟಿಯನ್ನು ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ಸಿದ್ಧಪಡಿಸಿ, ಮೇಲಧಿಕಾರಿಗಳ ಅನುಮೋದನೆ ಹಾಗೂ ಜಿಲ್ಲಾಡಳಿತದ ನಿರ್ಧಾರಕ್ಕೆ ಕಾಯುತ್ತಿದ್ದಾರೆ.
ಸದ್ಯ ದಸರಾಗೆ ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ವಿಕ್ರಮ, ವಿಜಯಾ, ಪ್ರಶಾಂತ, ಭೀಮ, ಮಹೇಂದ್ರ, ಗೋಪಿ, ಕಾವೇರಿ, ಹರ್ಷ, ಲಕ್ಷ್ಮಣ, ಚೈತ್ರಾ ಹಾಗೂ ಮಹಾರಾಷ್ಟ್ರ ಭೀಮ ಆನೆ ಸಿದ್ಧವಾಗಿವೆ. ಅಭಿಮನ್ಯು ಆನೆ ಅಂಬಾರಿ ಹೊತ್ತು ಸಾಗುವುದು ನಿಚ್ಚಳವಾಗಿದೆ.









