ಮತಾಂತರ ಮಾಡಿದ್ರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ : ಮುತಾಲಿಕ್

1 min read

ಮತಾಂತರ ಮಾಡಿದ್ರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ : ಮುತಾಲಿಕ್

ವಿಜಯಪುರ : ಮತಾಂತರ ಮಾಡುವವರಿಗೆ ಶ್ರೀ ರಾಮಸೇನೆ ಎಚ್ಚರಿಕೆ ನೀಡುತ್ತಿದೆ.

ಇದೇ ಕೆಲಸ ಮುಂದುವರೆಸಿದರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚು ಮತಾಂತರ ಹೆಚ್ಚಾಗಿ ನಡೆಯುತ್ತಿದೆ.

ಹಳ್ಳಿ ಹಳ್ಳಿಯಲ್ಲಿ ಕ್ರಿಶ್ಚಿಯನ್ ಮತಾಂತರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿದರು.

ಈ ಹಿಂದೆ ಬಡವರು, ಅನಕ್ಷರಸ್ಥರನ್ನ ಮತಾಂತರ ಮಾಡಲಾಗುತ್ತಿತ್ತು. ಆದ್ರೀಗ ಎಲ್ಲ ಸಮುದಾಯ, ವರ್ಗಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

pramod-muthalik saaksha tv

ಅದರಲ್ಲೂ ದಾವಣಗೆರೆ, ಚಿತ್ರದುರ್ಗದ ಭಾಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಲಿಂಗಾಯತರನ್ನು ಮತಾಂತರ ಮಾಡಲಾಗಿದೆ.

ಈ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರು ಮತಾಂತರ ಆದವರನ್ನು ವಾಪಸ್ ತರುವಂತೆ ಸಮಾಜಕ್ಕೆ ಪತ್ರ ಬರೆದಿದ್ದಾರೆ, ನಾನು ಅದನ್ನು ಸ್ವಾಗತಿಸುತ್ತೇನೆ ಎಂದರು.

ಮುಂದುವರೆದು ಮತಾಂತರ ಮುಂದುವರೆಸಿದರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿ ಪ್ರಮೋದ್ ಮುತಾಲಿಕ್, ಕಾನೂನು ರಚನೆಯಾದ ಬಳಿಕ ಅದನ್ನು ಜಾರಿಗೆ ತರುವಂತಹ ಕೆಲಸವೂ ಆಗಬೇಕಿದೆ.

ಮಠಾಧೀಶರೂ ಸಹ ಮಠವನ್ನು ಬಿಟ್ಟು ಹೊರಗೆ ಬಂದು ಕೇರಿಗಳಿಗೆ ಭೇಟಿ ನೀಡಿ, ಮತಾಂತರ ಆದವರನ್ನು ವಾಪಸ್ ತರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd