ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತವರು ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ನಟಿ ಮಿಂಚಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಸಹೋದರನ ಎಂಗೇಜ್‌ಮೆಂಟ್ ನಲ್ಲಿ ಮಿಂಚಿದ್ದಾರೆ. ಮದುವೆ ಸಮಾರಂಭದ ಫೋಟೋಗಳು ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿರುವ ನಟಿ ಇತ್ತೀಚೆಗೆ ಭಾರತಕ್ಕೆ ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆಭರಣ ಮಳಿಗೆ ಚಾಲನೆ ಕಾರ್ಯಕ್ರಮ, ಅಂಬಾನಿ ಕುಟುಂಬದ ಪಾರ್ಟಿ, ಮನ್ನಾರಾ ಚೋಪ್ರಾ ಬರ್ತ್‌ಡೇ ಸೇರಿದಂತೆ ಈಗ ತಮ್ಮ ಕುಟುಂಬದ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಸಹೋದರ ಸಿದ್ಧಾರ್ಥ್ ಚೋಪ್ರಾ ಎಂಗೇಜ್‌ಮೆಂಟ್ ಮುಂಬೈನಲ್ಲಿ ಭರ್ಜರಿಯಾಗಿ ನಡೆಯಿತು. ಬಹುಕಾಲದ ಗೆಳತಿ ನೀಲಂ ಜೊತೆ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿರ್ಮಾಪಕರಾಗಿರುವ ಪ್ರಿಯಾಂಕಾ ಸಹೋದರನಿಗೆ ಬಾಲಿವುಡ್ ಸೆಲೆಬ್ರಿಟಿಗಳು ಹಾರೈಸಿದ್ದಾರೆ.