ಹಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಸದ್ಯ ಅಂಬಾನಿ ಮನೆಗೆ ದುಬಾರಿ ಬೆಲೆಯ ನಕ್ಲೇಸ್ ಹಾಕಿಕೊಂಡು ಬಂದು ಭಾರೀ ಸುದ್ದಿಯಾಗಿದ್ದಾರೆ.
ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ನಟಿ ಪ್ರಿಯಾಂಕಾ ಈಗ ಹಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಲಸಕ್ಕೆ ಬ್ರೇಕ್ ನೀಡಿ ಮುಂಬೈ ನಗರಕ್ಕೆ ಆಗಮಿಸಿದ್ದ ಇವರು, ಆಭರಣದ ವಿಚಾರವಾಗಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಅಂಬಾನಿ ಕುಟುಂಬ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಪ್ರಿಯಾಂಕಾ, ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದರು. ಆಕರ್ಷಕವಾದ 8 ಕೋಟಿ ರೂ. ಮೌಲ್ಯದ ಡೈಮೆಂಡ್ ನೆಕ್ಲೇಸ್ ಧರಿಸಿ ಬಂದಿದ್ದರು. ಈ ನೆಕ್ಲೇಸ್ ಎಲ್ಲರ ಗಮನ ಸೆಳೆದಿದೆ. ಬೆಲೆ ಕೇಳಿ ಕೆಲವರು ಬೆಚ್ಚಿ ಬಿದ್ದಿದ್ದಾರೆ.
ನಂತರ ಆಭರಣ ಲಾಂಚ್ ಕಾರ್ಯಕ್ರಮವೊಂದರಲ್ಲಿ ನಟಿ ಬಿಳಿ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ಸರ್ಪದ ನೆಕ್ಲೇಸ್ ಧರಿಸಿ ನಟಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು, 59 ಲಕ್ಷ ರೂ. ಮೌಲ್ಯದ ನೆಕ್ಲೇಸ್ ಧರಿಸಿ ಹೈಲೆಟ್ ಆಗಿದ್ದಾರೆ.