Pro kabaddi : ತಲೈವಾಸ್ ಮಣಿಸಿದ ಜಯಪುರ..!!
ರೈಡರ್ ಅರ್ಜುನ್ ದೇಶ್ವಾಲ್ ಅವರ ಅಮೋಘ ರೈಡಿಂಗ್ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಜೈಪುರ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೇರಿದೆ.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜೈಪುರ ತಂಡ ತಲೈವಾಸ್ ವಿರುದ್ಧ 41 -26 ಅಂಕಗಳಿಂದ ಗೆದ್ದು ಬೀಗಿತು. ಆರಂಭದಲ್ಲೆ ಸವಾರಿ ಮಾಡಿದ ಜೈಪುರ ಮೊದಲಾರ್ಧದಲ್ಲಿ 20-13 ಅಂಕಗಳಿಂದ ಮುನ್ನಡೆ ಪಡೆಯಿತು.ರಾಜಸ್ತಾನ ಪರ ರೈಡರ್ಗಳಾದ ಅರ್ಜುನ್ ದೇಶ್ವಾಲ್ 12, ಅಜಿತ್ 9 ಅಂಕಗಳನ್ನು ಪಡೆದರು. ತಲೈವಾಸ್ ಪರ ರೈಡರ್ಗಳಾದ ನರೇಂದರ್ ಹಾಗೂ ಅಜಿಂಕ್ಯ ಪವಾರ್ ತಲಾ 4 ಅಂಕ ಸಂಪಾದಿಸಿದರು.
ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 50-47 ಅಂಕಗಳಿಂದ ರೋಚಕ ಗೆಲುವು ದಾಖಲಿಸಿದೆ.ಡೆಲ್ಲಿ ಪರ ರೈಡರ್ಗಳಾದ ಅಶು ಮಲ್ಲಿಕ್ 12, ವಿಜಯ್ ಮಲ್ಲಿಕ್ ಹಾಗೂ ನವೀನ್ ತಲಾ 11 ಅಂಕ ಪಡೆದರು.
ಗುಜರಾತ್ ಪರ ರೈಡರ್ ಪ್ರತೀಕ್ ದಾಹಿಯಾ ಏಕಾಂಗಿ ಹೋರಾಟ ನಡೆಸಿ 20 ಅಂಕ ತಂದುಕೊಟ್ಟರು. ಮತ್ತೋರ್ವ ರೈಡರ್ ಸೋನು 9 ಅಂಕ ಸಂಪಾದಿಸಿದರು.