ಅಪ್ಪು ನಮನ ಕಾರ್ಯಕ್ರಮ : ಲಘು ತಿಂಡಿಗೆ ಬಿಸಿ ಬೇಳೆಬಾತ್, ಚಿಪ್ಸ್, ಬೂಂದಿ, ಮದ್ದೂರು ವಡೆ, ಜಾಮೂನ್ ವ್ಯವಸ್ಥೆ

1 min read
Puneeth Rajkumar

ಅಪ್ಪು ನಮನ ಕಾರ್ಯಕ್ರಮ : ಲಘು ತಿಂಡಿಗೆ ಬಿಸಿ ಬೇಳೆಬಾತ್, ಚಿಪ್ಸ್, ಬೂಂದಿ, ಮದ್ದೂರು ವಡೆ, ಜಾಮೂನ್ ವ್ಯವಸ್ಥೆ

ಇಂದು ಅಪ್ಪು ನಮನ ಕಾರ್ಯಕ್ರಮಕ್ಕೆ ಸುಮಾರು 2000 ಜನ , ಬೇರೆ ಭಾಷೆಗಳ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ.. ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.. ಕಾರ್ಯಕ್ರಮದ ಊಟದ ವ್ಯವಸ್ಥೆ ಬಗ್ಗೆ  ಗಾಯಿತ್ರಿ ವಿಹಾರ್ ಕಂಟ್ರೋಲರ್ ಪಂಕಜ್ ಕೊಠಾರಿ ಹೇಳಿಕೆ ನೀಡಿದ್ದಾರೆ..

ಇವತ್ತು ಪುನೀತ್ ನಮನ ಕಾರ್ಯಕ್ರಮಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಪೊಲೀಸ್ ಹಾಗೂ ಸಿಬ್ಬಂದಿಗಳಿಗೆ ತಿಂಡಿ ವ್ಯವಸ್ಥೆ ‌ಮಾಡಲಾಗಿತ್ತು. ಮಸಾಲೆ ದೋಸೆ, ವಾಂಗಿಬಾತ್ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.  ಮಧ್ಯಾಹ್ನಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಕಾರ್ಯಕ್ರಮದ ನಂತರ ಗೆಸ್ಟ್ ಗಳಿಗೆ ಲಘು ತಿಂಡಿ ವ್ಯವಸ್ಥೆ ಮಾಡಲಾಗಿದೆ.  ಲಘು ತಿಂಡಿಗೆ ಬಿಸಿ ಬೇಳೆಬಾತ್, ಚಿಪ್ಸ್, ಬೂಂದಿ, ಮದ್ದೂರು ವಡೆ, ಜಾಮೂನ್ ವ್ಯವಸ್ಥೆ ಮಾಡಲಾಗಿದೆ. ಸಂಜೆ ಅಪ್ಪು ಇಷ್ಟದ ಬಳ್ಳಾರಿ ಮಿರ್ಚಿ ಬಜ್ಜಿ .. ಕಾಫಿ- ಟೀ ಇರಲಿದೆ.

ಪುನೀತ್ ಅವರ ಒಡನಾಟ ನನಗೆ ಹಲವು ವರ್ಷಗಳಿದ್ದು. ಇಂತಹ ಕಾರ್ಯಕ್ರಮ ಆಯೋಜನೆ ಮಾಡ್ತಿರೋದು ಖುಷಿ ಜತೆ ಬೇಸರ ಆಗ್ತಿದೆ. ಅಪ್ಪುಗೆ ಸೇವೆ ಮಾಡ್ತಿರೋ ಖುಷಿ ಇದೆ, ಆದರೆ ಪ್ರೀತಿಯ ಅಪ್ಪು ಇನ್ನಿಲ್ಲ ಎಂಬ ಬೇಸರವೂ ಇದೆ ಎಂದು ಹೇಳಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ‘ನಮನ ಕಾರ್ಯಕ್ರಮ’ಕ್ಕೆ ಅತಿಥಿಗಳ ಆಗಮನ ಶುರು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd