Raghava Lawrence | ಚಂದ್ರಮುಖಿ – 2 ಗಾಗಿ ರಾಘವ ಲಾರೆನ್ಸ್ ಡ್ರಾಸ್ಟಿಕ್ ಟ್ರಾನ್ಸ್ ಫರ್ಮೆಷನ್
ಸೂಪರ್ ಸ್ಟಾರ್ ರಜಿನಿಕಾಂತ್ ನಾಯಕನಟರಾಗಿ ನಟಿಸಿದ್ದ ಚಂದ್ರಮುಖಿ ಸಿನಿಮಾ ಅಸಾಧಾರಣ ಗೆಲುವು ಸಾಧಿಸಿದ್ದು ಗೊತ್ತೇ ಇದೆ.
ಇದರ ನಿರ್ದೇಶಕ ಪಿ ವಾಸು ಚಂದ್ರಮುಖಿಯ ಸೀಕ್ವೆಲ್ ತೆಗೆಯುತ್ತಿದ್ದಾರೆ.
ಇದರಲ್ಲಿ ನೃತ್ಯ ನಿರ್ದೇಶಕ, ನಟ ರಾಘವ ಲಾರೆನ್ಸ್ ಹೀರೋ ಆಗಿ ನಟಿಸುತ್ತಿದ್ದಾರೆ.
ಈ ಸಿನಿಮಾಗಾಗಿ ಲಾರೆನ್ಸ್ ಬಾಡಿ ಬ್ಯೂಲ್ಡ್ ಮಾಡಿದ್ದು ವಿಶೇಷವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಒಂದು ಫೋಟೋವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಚಂದ್ರಮುಖಿ – 2 ಸಿನಿಮಾಗಾಗಿ ಅವರು ಸಂಪೂರ್ಣವಾಗಿ ಮೇಕೋವರ್ ಆಗಿದ್ದು, ಜಿಮ್ ಟ್ರೈನರ್ ಶಿವ ಮಾಸ್ಟರ್ ಗೆ ಧನ್ಯವಾದ ತಿಳಿಸಿದ್ದಾರೆ.
ಇದಲ್ಲದೆ ಅವರು ಈವರೆಗೂ ಲಾರೆನ್ಸ್ ಅವರು ಒಂದು ಚಾರಿಟಬಲ್ ಟ್ರಸ್ಟ್ ಮೂಲಕ ಸಾಮಾಜ ಸೇವೆ ಮಾಡುತ್ತಿದ್ದರು.
ಇದಕ್ಕೆ ಸಾಕಷ್ಟು ಮಂದಿ ಆರ್ಥಿಕ ಸಹಾಯ ಮಾಡುತ್ತಿದ್ದರು.
ಆದ್ರೆ ಇನ್ಮುಂದೆ ಯಾರು ಟ್ರಸ್ಟ್ ಗೆ ಆರ್ಥಿಕ ಸಹಾಯ ಮಾಡಬೇಡ ಎಂದಿದ್ದು, ಈಗ ನಾನು ಆರ್ಥಿಕವಾಗಿ ಸ್ಥಿರವಾಗಿದ್ದೇನೆ, ಪ್ರಜೆಗಳಿಗೆ ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ ಎಂದಿದ್ದಾರೆ.