RCB : ಸೋಫಿ “ ಡಿವೈನ್” ಬ್ಯಾಟಿಂಗ್, ಕಣ್ಮುಂದೆ ಬಂದ ಎಬಿಡಿ, ಗೇಲ್ ಆಟ…..
ಕೇವಲ 36 ಎಸೆತ 9 ಬೌಂಡರಿ 8 ಸಿಕ್ಸರ್ ಸಹಿತ 99 ರನ್ ಗಳಿಸಿ ಕೇವಲ 1 ರನ್ ಗಳಿಂದ ಮಹಿಳಾ ಪ್ರೀಮಿಯರ್ ಲೀಗ್ ನ ಮೊದಲ ಶತಕದಿಂದ ವಂಚಿತಳಾಗಿ ಹೆಜ್ಜೆ ಹಾಕುತ್ತಿದ್ದರೆ ಇಡೀ ಸ್ಟೇಡಿಯಂ ಸ್ಟಾಂಡಿಂಗ್ ಒವೇಷನ್ ನೀಡಿ ಆಟಗಾರ್ತಿಯನ್ನ ಅಭಿನಂದಿಸಿತು. ಇಂಥಹ ವಿಧ್ವಂಸಕ ಆಟ ಪ್ರದರ್ಶಿಸಿದ್ದು, ಸೋಫಿ ಡಿವೈನ್ ವಿಧ್ವಂಸಕತೆಗೆ ಸಾಕ್ಷಿಯಾಗಿದ್ದು, ಮುಂಬೈನ ಬ್ರಬೋರ್ನ್ ಸ್ಟೇಡಿಯಂ….
ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನ ಎದುರಿಸಿದ ಆರ್ ಸಿ ಬಿ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇ ಬೇಕಾದ ಒತ್ತಡದಲ್ಲಿತ್ತು. ಗುಜರಾತ್ ನೀಡಿದ್ದ 189 ರನ್ ಗಳ ಬೃಹತ್ತ ಮೊತ್ತ ಬೆನ್ನತ್ತಲು ನಾಯಕಿ ಸ್ಮೃತಿ ಮಂದನಾ ಮತ್ತು ಸೋಫಿ ಡಿವೈನ್ ಕಣಕ್ಕಿಳಿದಿದ್ದರು. ಪಂದ್ಯದ ದ್ವಿತಿಯಾರ್ಧದಲ್ಲೇ ಶುರುವಾಯ್ತು ಆರ್ ಸಿ ಬಿ ಅಸಲಿ ಆಟ.
ಎರಡನೇ ಈ ಓವರ್ ನಿಂದಲೇ ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಸೋಫಿ ಕ್ರೀಡಾಂಗಣದ ಮೂಲೆ ಮೂಲೆಗೆ ಬಾಲ್ ಪರಿಚಯಿಸಿ ಗುಜರಾತ್ ಬೌಲರ್ ಗಳ ಬೆವರಿಳಿಸಿದರು. ಆಶ್ಲೀ ಗಾರ್ಡ್ನರ್ ಎಸೆದ 2 ನೇ ಒವರ್ ನಲ್ಲಿ ಮೊದಲ ಎಸೆತ ಡಾಟ್ ಆದರೇ ಉಳಿದ ಐದು ಎಸೆತಗಳಲ್ಲಿ 6,4,4,6,4, ಬಾರಿಸಿ 24 ರನ್ ಗಳಿಸಿದರು.
ಸೋಫಿ ಅಬ್ಬರಕ್ಕೆ RCB ಕೇವಲ 3.4 ಓವರ್ ಗಳಲ್ಲಿ 50 ರನ್ ಗಳ ಗಡಿ ದಾಟಿತ್ತು. ಆರು ಓವರ್ ಗಳ ಪವರ್ ಫ್ಲೇ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 77 ರನ್ ದಾಖಲಿಸಿತ್ತು. ಇದು ಮಹಿಳಾ IPL ನಲ್ಲೇ ಪವರ್ ಪ್ಲೇನಲ್ಲಿ ಅತ್ಯಧಿಕ ಮೊತ್ತ. ನ್ಯೂಜಿಲ್ಯಾಂಡ್ ನ ಈ ಆಟಗಾರ್ತಿ ಕೇವಲ 20 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸಹಿತ ಅರ್ಧ ಶತಕ ಭಾರಿಸಿದರು. 8 ಒವರ್ ಗಳ ಒಳಗೆ ಆರ್ ಸಿಬಿ 100 ಗಡಿ ದಾಟಿತ್ತು.
9 ನೇ ಓವರ್ ಸೋಫಿಯ ತೋಳ್ಬಲಕ್ಕೆ ಸಾಕ್ಷಿಯಾಯಿತು. ತನುಜಾ ಕನ್ವರ್ ಎಸೆದ ಓವರ್ ನಲ್ಲಿ 3 ಸಿಕ್ಸರ್ 1 ಬೌಂಡರಿ ಭಾರಿಸಿದರು. ಇದರಲ್ಲಿ ಒಂದು ಸಿಕ್ಸರ್ 94 ಮೀಟರ್ ದೂರಕ್ಕೆ ತಲುಪಿತ್ತು. ಇದು ಇಲ್ಲಿಯವರೆಗಿನ ಅತ್ಯಧಿಕ ಅಂತರದ ಸಿಕ್ಸರ್ ಎಂದು ಪರಿಗಣಿತವಾಯಿತು. ಈ ಒವರ್ ನಲ್ಲಿ ಬಂದಿದ್ದು ಒಟ್ಟು 25 ರನ್
11.1 ಒವರ್ ಗಳಲ್ಲಿ ಆರ್ ಸಿ ಬಿ ಗಳಿಸಿದ್ದ ಸ್ಕೋರ್ ನ ಮೊತ್ತ 150 ರನ್ . ಇಷ್ಟಕ್ಕೆ ನಿಲ್ಲದ ಸೋಫಿ ಅಬ್ಬರ 36 ಎಸೆತಗಳಲ್ಲಿ 99 ರನ್ ಗಳಿಗೆ ಬಂದು ನಿಂತಿತು. ಶತಕದ ಅಂಚಿನಲ್ಲಿದ್ದಾಗ ಆಟಗಾರ್ತಿ ಕಿಮ್ ಗಾರ್ತ್ ಶಾಕ್ ನೀಡಿದರು. ತೇಲಿಬಂದ ಚೆಂಡನ್ನ ಬಾರಿಸಲು ಮುಂದಾಗಿ ಅಶ್ವಿನಿ ಕುಮಾರಿಗೆ ಕ್ಯಾಚಿತ್ತು 1 ರನ್ ಗಳಿಂದ ಶತಕ ವಂಚಿತರಾರು. ಈ ರೀತಿ ಸೋಫಿಯ ಡಿವೈನ್ ಆಟ ಮುಗಿದಿತ್ತು.
ಕೊನೆಯಲ್ಲಿ ಗೆಲುವಿನ ಮೂಲಕ ಆರ್ ಸಿ ಬಿ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.
RCB : Sophie “Divine” batting; ABD, Gayle game that came before…..