ರಾಂಚಿ: ಕೇಂದ್ರ ಸರ್ಕಾರವು ರೈತರಿಗೆ ದೀಪಾವಳಿಯ ಮಾರನೇ ದಿನ ಗುಡ್ ನ್ಯೂಸ್ ನೀಡಿದೆ.
ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ (PM Kisan Scheme)ವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆಗಸ್ಟ್ ನಿಂದ ನವೆಂಬರ್ ವರೆಗಿನ ಒಟ್ಟು 18 ಸಾವಿರ ಕೋಟಿ ರೂ. ಹಣವನ್ನು ಪಿಎಂ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ನ ಖೂಂಟಿಯಲ್ಲಿ (Khunti, Jharkhand) ನಡೆದ ಕಾರ್ಯಕ್ರಮದಲ್ಲಿ 15ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಒಟ್ಟು 8.5 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ. ಹಣ ಬಿಡುಗಡೆ ಮಾಡಿದ್ದಾರೆ.
ವರ್ಷಕ್ಕೆ 6 ಸಾವಿರ ರೂಗಳನ್ನು ತಲಾ 2 ಸಾವಿರ ರೂ.ಗಳನ್ನು 3 ಕಂತುಗಳಲ್ಲಿ ಸರ್ಕಾರವು ಕೃಷಿಕ ಕುಟುಂಬಗಳಿಗೆ ನೀಡುತ್ತಿದೆ. ರಿಜಿಸ್ಟ್ರೇಶನ್ ಸಂಖ್ಯೆ ಗೊತ್ತಿಲ್ಲದಿದ್ದರೆ ನೊಂದಾಯಿತು ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಮೂಲಕ ರಿಜಿಸ್ಟ್ರೇಶನ್ ನಂಬರ್ ಪಡೆಯಬಹುದು.