RRR ಸಿನಿಮಾದಿಂದ ಸ್ಟಾರ್ ನಟಿಯನ್ನ ಕೈಬಿಟ್ಟಿದ್ದೇಕೆ ರಾಜಮೌಳು – ಯಾರು ಆ ನಟಿ..?
RRR ಸಿನಿಮಾ ಒನ್ ಆಫ್ ದಿ ಹೈಲಿ ಎಕ್ಸ್ ಪೆಕ್ಟೆಡ್ ಸಿನಿಮಾ.. ಯಂಗ್ ಟೈಗರ್ ಜ್ಯೂ. NTR ಹಾಗೂ ಮೆಘಾ ಪವರ್ ಸ್ಟಾರ್ ರಾಮ್ ಚರಣ್ ಒಟ್ಟಾಗಿ ಕಾಣಿಸಿಕೊಳ್ತಿರುವ ಹೈ ಬಜೆಟ್ ಸಿನಿಮಾ. ಬಾಹುಬಲಿ ಖ್ಯಾತಿಯ ರಾಜಮೌಳಿ ಡೈರೆಕ್ಷನ್ ಸಿನಿಮಾದ ಹೈಲೆಟ್ ಹಾಗೂ + ಪಾಯಿಂಟ್ ಕೂಡ.
ಸಿನಿಮಾದಲ್ಲಿ ದೊಡ್ಡ ದೊಡ್ಡ ತಾರಾಬಳಗವಿದೆ. ಪೋಸ್ಟರ್ ಹಾಗೂ ಟೀಸರ್ ಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾ ಮೇಲೆ ನಿರೀಕ್ಷೆ ತುಂಬಾನೆ ಇದೆ. ಆದ್ರೆ ರಾಜಮೌಳಿ ಅವರು ಸ್ಟಾರ್ ನಟಿಯನ್ನ ಸಿನಿಮಾದಿಂದ ಕೈಬಿಟ್ಟಿದ್ದಾರೆ. ಹೌದು ಬಹುಭಾಷಾ ನಟಿ ಶ್ರಿಯಾ ಶರಣ್ ರನ್ನ ಸಿನಿಮಾದಿಂದ ಕೈಬಿಡಲಾಗಿದೆ. ಈ ಸಿನಿಮಾದಲ್ಲಿ ಶ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದ್ರೆ ಇದೀಗ ಆಕೆಯ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ.
ಹೌದು ಇದಕ್ಕೆ ಕಾರಣ ಸಿನಿಮಾದ ಲೆಂತ್. ಸಿನಿಮಾದ ಉದ್ದ ಹೆಚ್ಚಾಗುತ್ತಿರುವ ಕಾರಣದಿಂದ ಕೆಲವು ಪಾತ್ರಗಳನ್ನು ಕತ್ತರಿಸಲಾಗಿದ್ದು, ಅದರಲ್ಲಿ ಶ್ರಿಯಾ ಅವರು ಪಾತ್ರವೂ ಒಂದು. ಎಲ್ಲವೂ ಅಂದುಕೊಮಡಂತೆ ಆಗಿದ್ದರೆ ಮುಂದಿನ ತಿಂಗಳೇ ಶ್ರಿಯಾ ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಬೇಕಾಗಿತ್ತು. ಆದ್ರೆ ಇದೀಗ ಅವರಿಗೆ ಸಿನಿಮಾದಿಂದಲೇ ಗೇಟ್ ಪಾಸ್ ನೀಡಲಾಗಿದೆ.
ಥಿಯೇರ್ ಗಳಲ್ಲಿ 50% ಸೀಟಿಂಗ್ ಭಯ – ದಯಮಾಡಿ ನಿರ್ಬಂಧ ಹೇರಬೇಡಿ : ಸರ್ಕಾರಕ್ಕೆ ‘ಸಲಗ’ನ ಮನವಿ..!
ಬಹುಬಾಷಾ ನಟ ಪ್ರಕಾಶ್ ರಾಜ್ ಅವರಿಗೆ 56 ನೇ ಹುಟ್ಟುಹಬ್ಬದ ಸಂಭ್ರಮ..!