ಅಕ್ಕಿ ಹಿಟ್ಟಿನ ವಡೆ

1 min read
Saakshatv cooking recipe how to prepare vade

ಅಕ್ಕಿ ಹಿಟ್ಟಿನ ವಡೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ ಹಿಟ್ಟು – 1 ಕಪ್
ಮೊಸರು -1 ಕಪ್
ಶುಂಠಿ ತುರಿ -1 ಚಮಚ
ಹಸಿಮೆಣಸು -1
ಈರುಳ್ಳಿ -1
ಕೊತ್ತಂಬರಿ ಸೊಪ್ಪು -ಸ್ವಲ್ಪ
ಇಂಗು -ಚಿಟಿಕೆಯಷ್ಟು
ಕಾಳುಮೆಣಸು – 8
ಜೀರಿಗೆ – 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe how to prepare vade

ಮಾಡುವ ವಿಧಾನ
ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಮೊಸರು ಮತ್ತು 1 ಕಪ್ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಉಪ್ಪು, ಇಂಗು, ಜೀರಿಗೆ, ಗುದ್ದಿದ ಕಾಳುಮೆಣಸು , ಶುಂಠಿ ತುರಿ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು ಸೇರಿಸಿ ಚೆನ್ನಾಗಿ ಬೆರೆಸಿ.

ಬಳಿಕ ಪ್ಯಾನ್ ಗೆ ಈ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ ನೀರಿನ ಅಂಶವನ್ನು ತೆಗೆದು ಮುದ್ದೆಯ ರೀತಿ ಮಾಡಿ. ನಂತರ ಚಿಕ್ಕದಾಗಿ ‌ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಮಿಶ್ರ ಮಾಡಿ. ಇದು ತಣ್ಣಗಾದ ನಂತರ ವಡೆ ರೀತಿಯಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಈಗ ರುಚಿಯಾದ ಅಕ್ಕಿ ವಡೆ ಸವಿಯಲು ‌ಸಿದ್ಧವಾಗಿದೆ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#Saakshatv #cookingrecipe  #vade

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd