ಉದ್ದಿನ ವಡೆ
ಬೇಕಾಗುವ ಸಾಮಾಗ್ರಿಗಳು
ಉದ್ದು – 1 ಕಪ್
ರವೆ – 1 ಕಪ್
ಶುಂಠಿ ತುರಿ- ಸ್ವಲ್ಪ
ಹಸಿ ಮೆಣಸು – 2
ಕೊತ್ತಂಬರಿಸೊಪ್ಪು – ಸ್ವಲ್ಪ
ಸಕ್ಕರೆ – 1 ಚಮಚ
ಅಡಿಗೆ ಸೋಡಾ ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಉದ್ದಿನಬೆಳೆಯನ್ನು 2 ರಿಂದ 3 ಗಂಟೆ ನೀರಿನಲ್ಲಿ ನೆನೆಹಾಕಿ ನಂತರ ಹದವಾಗಿ ರುಬ್ಬಿ. ಬಳಿಕ ಶುಂಠಿ ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸು ಮತ್ತು ಕೊತ್ತಂಬರಿಸೊಪ್ಪು, ಸಕ್ಕರೆ, ಅಡಿಗೆ ಸೋಡಾ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು 2 ಗಂಟೆಗಳ ಕಾಲ ಹಾಗೆಯೇ ಬಿಡಿ. ಬಳಿಕ ಅದಕ್ಕೆ ರವೆಯನ್ನು ಸೇರಿಸಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಉದ್ದಿನ ಹಿಟ್ಟಿನ ಮಿಶ್ರಣವನ್ನು ವಡೆಯಕಾರದಲ್ಲಿ ಮಧ್ಯದಲ್ಲಿ ಸಣ್ಣ ತೂತು ಮಾಡಿ ಬಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಎರಡೂ ಬದಿಯನ್ನು ಕರಿದು ತೆಗೆಯಿರಿ. ಈಗ ರುಚಿಯಾದ ಉದ್ದಿನ ವಡೆಯನ್ನು ಕಾಯಿ ಚಟ್ನಿ ಜೊತೆ ಸವಿಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1428173436589940737?s=19
https://twitter.com/SaakshaTv/status/1428190736017731591?s=19
https://twitter.com/SaakshaTv/status/1428152910932754433?s=19
https://twitter.com/SaakshaTv/status/1427810246601232388?s=19
#Saakshatv #cookingrecipe #uddinavade








