ನಟ ಸಾಯಿಕುಮಾರ್ ಧ್ವನಿ ಕೇಳುವುದೇ ಒಂದು ಸೊಗಸು. ಯಾವುದೇ ಪಾತ್ರವಿರಲಿ, ಅಲ್ಲಿ ಸಾಯಿಕುಮಾರ್ ಧ್ವನಿ ಬಂದರೆ ಜನ ಉಸಿರು ಬಿಡದೆ ಕೇಳುತ್ತಾರೆ. ಸದ್ಯ ಈಗ ಅವರು ಹಿರಿಯ ನಟ ರಜನಿಕಾಂತ್ ಅವರಿಗೆ ಧ್ವನಿ ನೀಡಿದ್ದಾರೆ.
ನಟ ರಜನಿಕಾಂತ್ ಅಭಿನಯದ ‘ಲಾಲ್ ಸಲಾಂ’ ಸಿನಿಮಾ (Laal Salaam Movie) ಫೆಬ್ರವರಿ 9ರಂದು ಬಿಡುಗಡೆಗೆ ಸಿದ್ಧವಾಗಿದ್ದು, ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಾಯಿಕುಮಾರ್ ಅವರು ರಜನಿಕಾಂತ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
‘ಲಾಲ್ ಸಲಾಂ’ ತಮಿಳು ಸಿನಿಮಾ ತೆಲುಗಿನಲ್ಲಿಯೂ ಸಿದ್ಧವಾಗಿದೆ. ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದೆ. ತೆಲುಗು ವರ್ಷನ್ನಲ್ಲಿ ರಜನಿಕಾಂತ್ ಪಾತ್ರಕ್ಕೆ ಸಾಯಿಕುಮಾರ್ ಧ್ವನಿ ನೀಡಿದ್ದಾರೆ. ಖಡಕ್ ವಾಯ್ಸ್ ಪಾತ್ರದ ತೂಕ ಹೆಚ್ಚಿಸಿದೆ. ಇಲ್ಲಿಯವರೆಗೆ ರಜನಿಕಾಂತ್ ಅವರ ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಅವರ ಪಾತ್ರಕ್ಕೆ ಗಾಯಕ ಮನೋ ಅವರು ಧ್ವನಿ ನೀಡುತ್ತಿದ್ದರು. ಈಗ ಆ ಸ್ಥಳಕ್ಕೆ ಸಾಯಿಕುಮಾರ್ ಬಂದಿದ್ದು, ಕೆಲವರಿಗೆ ಬೇಸರ ಮೂಡಿಸಿದೆ. ಇನ್ನೂ ಕೆಲವರು ಖುಷಿ ಪಟ್ಟಿದ್ದಾರೆ. ಈ ಚಿತ್ರದಲ್ಲಿ ನಟಿಸಲು ರಜನಿಕಾಂತ್ 40 ಕೋಟಿ ರ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.