ಸೌತ್ ಬ್ಯೂಟಿ ಸಮಂತಾ ಈಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಸೌಥ್ ಗೆ ಗುಡ್ ಬೈ ಹೇಳಲಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಸಮಂತಾ ರುತು ಪ್ರಭು ನಟಿಸಿರುವ ‘ಸಿಟಾಡೆಲ್’ ರಿಮೇಕ್ ‘ಹನಿ ಬನಿ’ ಪ್ರಾಜೆಕ್ಟ್ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿವೆ. ಬಾಲಿವುಡ್ ನಲ್ಲಿ ಮೊದಲ ಪ್ರಾಜೆಕ್ಟ್ ಆಗಿರುವುದರಿಂದ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆಗಳು ಹುಟ್ಟಿವೆ. ತೆಲುಗು ಸಿನಿಮಾಗಳಿಗೆ ಗುಡ್ ಬೈ ಹೇಳಿ, ಬಾಲಿವುಡ್ ನಲ್ಲಿಯೇ ಸೆಟಲ್ ಆಗಲು ಸಮಂತಾ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ತೆಲುಗಿನಲ್ಲಿ ನಟಿಗೆ ಆಫರ್ ಕಮ್ಮಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಸಮಂತಾ ಈಗ ಮುಂಬೈನಲ್ಲಿಯೇ ಬೀಡು ಬೀಡಲು ಯೋಚಿಸಿದ್ದಾರಂತೆ. `ಸಿಟಾಡೆಲ್’ ನಂತರ ಅವರು ಬಾಲಿವುಡ್ ನತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ‘ಪುಷ್ಪ’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಗಿ ಹೋಗಿದೆ.