ಸ್ಟಾರ್ ನಟ ಯಶ್ (Yash) ‘ಟಾಕ್ಸಿಕ್’ ಸಿನಿಮಾದ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ, ಸದ್ಯ ಈ ಚಿತ್ರದ ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ.
ಈ ಸಿನಿಮಾದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಖಾನ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಖಚಿತವಾಗಿಲ್ಲ. ಈಗ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಬಿಟ್ಟು ಬೇರೆ ಯಾರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದುವರೆಗೆ ಸಿಕ್ಕಿಲ್ಲ. ಅನೇಕ ಅಂತೆ-ಕಂತೆಗಳು ಕೇಳಿಬರಲು ಆರಂಭಿಸಿವೆ. ಅತಿಥಿ ಪಾತ್ರ ಮಾಡುವಂತೆ ಅವರ ಬಳಿ ಕೇಳಲಾಗಿದೆ ಎಂಬ ಸುದ್ದಿ ಕೂಡ ಹಬ್ಬಿದೆ.
‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಕೆಜಿಎಫ್ 2’ ಚಿತ್ರಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮೂಡಿಬರಲಿದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಕಳೆದ ವರ್ಷ ನಟಿಸಿದ ‘ಪಠಾಣ್’, ‘ಜವಾನ್’, ‘ಡಂಕಿ’ ಸಿನಿಮಾಗಳು ಯಶಸ್ಸು ಕಂಡಿವೆ. ಹೀಗಾಗಿ ಅವರ ಹೆಸರು ಉತ್ತುಂಗದಲ್ಲಿದ್ದು, ‘ಟಾಕ್ಸಿಕ್’ ತಂಡದವರು ಶಾರುಖ್ ಖಾನ್ಗೆ ಈ ಅತಿಥಿ ಪಾತ್ರವನ್ನು ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.