shivarajkumar
ರಸ್ತೆ ಬದಿ ಟೀ ಕುಡಿದ ಶಿವಣ್ಣ: ಶಿವಣ್ಣ ಸರಳತೆಗೆ ಅಭಿಮಾನಿಗಳು ಫಿದಾ..!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಆದರೂ ಅವರ ಸರಳತೆಯ ಗುಣ ಎಂಥವರಿಗೂ ಮಾದರಿ. ಇದೀಗ ಅವರ ಸರಳತೆಗೆ ಹಿಡಿದ ಕೈಗನ್ನಡಿಯಂಬಂತೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ಹೌದು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಬ್ಯುಸಿ ಶೆಡ್ಯೂಲ್ ನಲ್ಲು ಬಿಡುವು ಮಾಡಿಕೊಂಡು ಕೆಲವೆಡೆ ಸುತ್ತಾಡ್ತಿದ್ದಾರೆ. ಹೀಗೆ ಪ್ರವಾಸದ ನಡುವೆ ಶಿವಣ್ಣ ಅವರು ಮೈಸೂರಿನಲ್ಲಿ ರಸ್ತೆ ಬದಿ ಅಂಗಡಿಯೊಂದರಲ್ಲಿ ಟೀ ಕುಡಿದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇನ್ನೂ ಈ ವೇಳೆ ಶಿವಣ್ಣ ಅವರನ್ನ ನೋಡಲು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.
ಹೈದರಾಬಾದ್ ಗೆ ಗುಡ್ ಬೈ ಹೇಳಿದ ಕಿಚ್ಚ : ‘ಶೂಟಿಂಗ್ ಅನುಭವ’ ಬಿಚ್ಚಿಟ್ಟ ನಟ
ಇನ್ನೂ ಅಭಿಮಾನಿಗಳ ಜೊತೆಗೆ ಶಿವಣ್ಣ ಫೋಟೋಗೆ ಫೋಸ್ ನೀಡಿದ್ರು. ಇನ್ನೂ ಕೆಲ ಅಭಿಮಾನಿಗಳು ಶಿವರಾಜ್ ಕುಮಾರ್ ಅವರಿಗೆ ಹೂಗುಚ್ಚ ನೀಡಿ ಗೌರವಿಸಿದರು. ರಸ್ತೆ ಬದಿಯಲ್ಲಿ ಶಿವಣ್ಣ ಟೀ ಕುಡಿಯುತ್ತಿರುವುದು ಹಾಗೂ ಅಭಿಮಾನಿಗಳ ಜೊತೆ ಮಾತನಾಡುತ್ತಿರುವ ವಿಡಿಯೋಗಳು ಹಾಗೂ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವೆ.
‘ಕರ್ನಾಟಕದಲ್ಲೇ ಶೂಟಿಂಗ್ ಮಾಡಿ’ ಎಂದ ಅಭಿಮಾನಿಗೆ ಕಿಚ್ಚ ಕೊಟ್ಟ ಉತ್ತರ ಇದು..!
ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಇಸಿಯಾಗಿರುವ ಸೆಂಚ್ಯುರಿ ಸ್ಟಾರ್ ಶಿವಣ್ಣ ಅವರು ಸದ್ಯ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾವಾದ ‘ಭಜರಂಗಿ-2’ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಹರ್ಷ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದರ ಹೊರತಾಗಿ ವಿಜಯ್ ಮಿಲ್ಟನ್ ನಿರ್ದೇಶನದ ‘ಶಿವಪ್ಪ’, ಹಾಗೂ ಆರ್ಡಿಎಕ್ಸ್, ಭೈರತಿ ರಣಗಲ್ಲು ಸಿನಿಮಾಗಳಲ್ಲೂ ಹ್ಯಾಟ್ರಿಕ್ ಹೀರೋ ನಟಿಸಲಿದ್ದಾರೆ.
ಮಾಲ್ಡಿವ್ಸ್ ಕಡಲ ಟೆಂಪರೇಚರ್ ಹೆಚ್ಚಿಸಿದ ಶಾನ್ವಿ
ಮಂಡ್ಯದ ಗಂಡು ಅಂಬರೀಶ್ ಗೆ ದೇವಾಲಯ ನಿರ್ಮಿಸುತ್ತಿರುವ ಅಭಿಮಾನಿಗಳು
shivarajkumar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel