ಸಿಂಪಲ್ , ಟೇಸ್ಟಿ ಅಡುಗೆ ರೆಸಿಪಿಗಳು

1 min read

ಸಿಂಪಲ್ , ಟೇಸ್ಟಿ ಅಡುಗೆ ರೆಸಿಪಿಗಳು

ಆರೋಗ್ಯಕರ ಕ್ಯಾರೆಟ್ ಜ್ಯೂಸ್

ಬೇಕಾಗಿರುವ ಸಾಮಗ್ರಿಗಳು :

ಕ್ಯಾರೆಟ್ – 4-5
ಶುಂಠಿ – 1 ಇಂಚು
ನಿಂಬೆ ಹಣ್ಣು – 1
ಪೆಪ್ಪರ್ ಪೌಡರ್ ಸ್ವಲ್ಪ,
ಪುದೀನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Saakshatv cooking recipe carrot juice

ಮಾಡುವ ವಿಧಾನ :
ಮೊದಲು ಕ್ಯಾರೆಟ್ ಗಳನ್ನು ಚೆನ್ನಾಗಿ ತೊಳೆದುಕೊಂಡು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ‌ನಂತರ ಅದನ್ನು ಜ್ಯೂಸರ್ ನಲ್ಲಿ ಹಾಕಿ, ನೀರು, ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಸೇರಿಸಿ ಚೆನ್ನಾಗಿ ರುಬ್ಬಿ.

ನಂತರ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಸೋಸಿ. ಇದಕ್ಕೆ ಪೆಪ್ಪರ್ ಪೌಡರ್, ಉಪ್ಪು ಅನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಕುಡಿಯಲು ಆರೋಗ್ಯಕರವಾದ ಕ್ಯಾರೆಟ್ ಜ್ಯೂಸ್ ‌ರೆಡಿ.

ಆರೋಗ್ಯದ ಜೊತೆಗೆ ರುಚಿಕರ ರೆಸಿಪಿಗಳು

ಕಡಲೆ ಹಿಟ್ಟಿನ ಹಲ್ವಾ

ಬೇಕಾಗುವ ಸಾಮಾಗ್ರಿಗಳು

ಕಡಲೇ ಹಿಟ್ಟು – 1 ಕಪ್
ತುಪ್ಪ – 1/2 ಕಪ್
ಸಕ್ಕರೆ – 1 ಕಪ್
ನೀರು – 1/2 ಕಪ್
ಏಲಕ್ಕಿ 2 ರಿಂದ 3
ಸಣ್ಣಗೆ ಕತ್ತರಿಸಿದ ಗೋಡಂಬಿ – ಸ್ವಲ್ಪ
ಒಣದ್ರಾಕ್ಷಿ – ಸ್ವಲ್ಪ
Saakshatv cooking recipe Besan halwa

ಮಾಡುವ ವಿಧಾನ

ಮೊದಲಿಗೆ ಬಾಣಲೆಯನ್ನು ಬಿಸಿ ‌ಮಾಡಿ. ನಂತರ ಕಡಲೇ ಹಿಟ್ಟನ್ನು ಕೆಂಪಗಾಗುವವರೆಗೆ ಹುರಿಯಿರಿ. ನಂತರ ತುಪ್ಪ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಿಧಾನವಾಗಿ ಕೈಯಾಡಿಸುತ್ತಾ ನೀರು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ನಂತರ ಮಿಶ್ರಣವನ್ನು ಕುದಿಯಲು ಬಿಡಿ.
ಮಿಶ್ರಣ ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಗಂಟಾಗದ ರೀತಿಯಲ್ಲಿ ಕೈಯಾಡಿಸುತ್ತಾ ಇರಿ. ಹಾಗೆಯೇ ಏಲಕ್ಕಿಯನ್ನು ಹುಡಿ ಮಾಡಿ ಸೇರಿಸಿ ಚೆನ್ನಾಗಿ ಕಲಸಿ.‌ ಗಟ್ಟಿಯಾದ ಬಳಿಕ ಬಾಣಲೆಯನ್ನು ಕೆಳಗಿಳಿಸಿ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಬಳಿಕ ಹಲ್ವಾದ ಮೇಲೆ ಗೋಡಂಬಿ ಒಣದ್ರಾಕ್ಷಿಯನ್ನು ಉದುರಿಸಿ. ರುಚಿಕರವಾದ ಕಡಲೆ ಹಿಟ್ಟಿನ ಹಲ್ವಾ ಸವಿಯಲು ಸಿದ್ಧ.

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಮಾವಿನಕಾಯಿಯ ಜ್ಯೂಸ್

ಬೇಕಾಗುವ ಸಾಮಾಗ್ರಿಗಳು

ತುರಿದ ಮಾವಿನಕಾಯಿ 1/2 ಕಪ್
ಸಕ್ಕರೆ 1/2 ಕಪ್
ಜೀರಿಗೆ 1 ಚಮಚ
ಪೆಪ್ಪರ್ ಪುಡಿ 1 ಚಮಚ
ನಿಂಬೆರಸ ಸ್ವಲ್ಪ
ಪುದೀನಾ ಸ್ವಲ್ಪ
ಕೆಂಪು ಮೆಣಸಿನ ಪುಡಿ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಐಸ್ ಕ್ಯೂಬ್ಸ್ 2-3
ನೀರು
Saakshatv cooking recipe Raw Mango juice

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಒಂದು ದೊಡ್ಡ ಲೋಟ ನೀರು ಹಾಕಿ ಸಕ್ಕರೆ ಸೇರಿಸಿ ಕುದಿಯಲು ಬಿಡಿ.
ಮೊದಲಿಗೆ ಮಾವಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿ. ನಂತರ ಮಿಕ್ಸಿ ಜಾರಿಗೆ ಹೆಚ್ಚಿದ ಮಾವಿನಕಾಯಿ ತುರಿಗಳನ್ನು ಹಾಕಿ, ಅದಕ್ಕೆ ಪುದೀನಾ ಸೊಪ್ಪು, ಜೀರಿಗೆ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ, ಪೆಪ್ಪರ್ ಹುಡಿ, ನಿಂಬೆರಸ ಮತ್ತು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು.
ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ನುಣ್ಣಗೆ ರುಬ್ಬಿದ ಮಿಶ್ರಣವನ್ನು ಸೋಸಿ. ಬಳಿಕ ಇದನ್ನು ಕುದಿಯುತ್ತಿರುವ ಸಕ್ಕರೆ ಪಾಕಕ್ಕೆ ಸೇರಿಸಿ. ಈ ಜ್ಯೂಸ್ ಗೆ ಐಸ್ ಕ್ಯೂಬ್ ಸೇರಿಸಿ ಮಾವಿನ ಕಾಯಿಯ ಜ್ಯೂಸ್ ಅನ್ನು ಸವಿಯಿರಿ.

5 ಸುಲಭ ಹಾಗೂ ರುಚಿಕರ ಅಡುಗೆಗಳ ರೆಸಿಪಿಗಳು

ಆಲೂಗಡ್ಡೆ ಪಕೋಡ

ಬೇಕಾಗುವ ಸಾಮಾಗ್ರಿಗಳು

ಆಲೂಗಡ್ಡೆ – 2 ರಿಂದ 3
1/2 ಕಪ್ ಕಡಲೆ ಹಿಟ್ಟು
1/2 ಟೀಸ್ಪೂನ್ ಅಕ್ಕಿ ಹಿಟ್ಟು
ಅಡಿಗೆ ಸೋಡಾ – ಪಿಂಚ್
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
ಅಗತ್ಯವಿರುವಷ್ಟು ನೀರು
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ

ಮಾಡುವ ವಿಧಾನ

ಆಲೂಗಡ್ಡೆಯ ಸಿಪ್ಪೆ ತೆಗೆದು ಮತ್ತು ಅವುಗಳನ್ನು ವೃತ್ತಾಕಾರವಾಗಿ ಕತ್ತರಿಸಿ. ಅವುಗಳನ್ನು ಸ್ವಲ್ಪ ನೀರಿನಲ್ಲಿ ಅದ್ದಿ ಇರಿಸಿ.

ಈಗ ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಉಪ್ಪು, ಅಕ್ಕಿ ಹಿಟ್ಟು, ಅಡಿಗೆ ಸೋಡಾ ಮತ್ತು ಕೆಂಪು ಮೆಣಸಿನ ಪುಡಿ ತೆಗೆದುಕೊಳ್ಳಿ.
ನೀರನ್ನು ಸ್ವಲ್ಪಮಟ್ಟಿಗೆ ಸೇರಿಸಿ, ಹಿಟ್ಟನ್ನು ತಯಾರಿಸಿಕೊಳ್ಳಿ.
ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಹಿಟ್ಟು ತುಂಬಾ ತೆಳ್ಳಗಿಲ್ಲ ಎಂದು ಖಚಿತ ಪಡಿಸಿಕೊಳ್ಳಿ.
 Saakshatv cooking recipe Aloo pakoda

ಬಾಣಲೆಗೆ ಎಣ್ಣೆಯನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಈಗ ವೃತ್ತಾಕಾರವಾಗಿ ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ಹಿಟ್ಟಲ್ಲಿ ಅದ್ದಿ, ನಿಧಾನವಾಗಿ ಎಣ್ಣೆಯಲ್ಲಿ ಬಿಡಿ.
ಹಿಟ್ಟಲ್ಲಿ ಅದ್ದಿದ ಆಲೂಗಡ್ಡೆಗಳ ಎರಡೂ ಬದಿಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ ತೆಗೆಯಿರಿ. ಆಲೂಗಡ್ಡೆ ಪಕೋಡಗಳನ್ನು ಕೆಚಪ್ ಅಥವಾ ಪುದಿನಾ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ಸವಿಯಿರಿ.

5 ಸುಲಭ , ರುಚಿಕರ , ಆರೋಗ್ಯಕರ ಹಾಗೂ ಅಡುಗೆ ರೆಸಿಪಿಗಳು ನಿಮಗಾಗಿ..!

ಧಿಡೀರ್ (instant) ಅವಲಕ್ಕಿ ಉತ್ತಪ್ಪ

ಬೇಕಾಗುವ ಸಾಮಗ್ರಿಗಳು :

ಅವಲಕ್ಕಿ 1/2 ಕಪ್
ಮೊಸರು 1/2 ಕಪ್
ರವೆ 1/2 ಕಪ್
ಚಿಕ್ಕದಾಗಿ ಕತ್ತರಿಸಿದ ತರಕಾರಿಗಳು (ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಹಸಿಮೆಣಸು, ಬೀನ್ಸ್)
ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ

ಮಾಡುವ ವಿಧಾನ :
ಮೊದಲಿಗೆ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ. ಬಳಿಕ ನೆನೆದ ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಉಪ್ಪು ಸೇರಿಸಿ ‌20 ನಿಮಿಷ ಹಾಗೆ ಬಿಡಿ.
Saakshatv cooking recipe poha uttappa
ಇನ್ನೊಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ತರಕಾರಿಗಳಿಗೆ ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಿ ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ದೋಸೆ ಕಾವಲಿಯನ್ನು ಬಿಸಿ ಮಾಡಿ. ಮಾಡಿಟ್ಟುಕೊಂಡ ಅವಲಕ್ಕಿ ಹಿಟ್ಟನ್ನು ಕಾವಲಿ ಮೇಲೆ ದೋಸೆಯಂತೆ ಹುಯ್ಯಿರಿ. ಬಳಿಕ ದೋಸೆ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಯನ್ನು ಉದುರಿಸಿ. ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ರುಚಿಯಾದ ಅವಲಕ್ಕಿ ಉತ್ತಪ್ಪ ಸವಿಯಲು ರೆಡಿ.

15 ನಿಮಿಷದಲ್ಲಿ ತಯಾರಿಸಿ ಮೊಟ್ಟೆ ಪಲ್ಯ

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಮೊಟ್ಟೆಗಳು 4

ಕ್ಯಾಪ್ಸಿಕಂ 1

ಟೊಮೆಟೊ 1

ಎಣ್ಣೆ 4 ಟೀಸ್ಪೂನ್

ಅರಿಶಿನ ಪುಡಿ 1/2 ಟೀಸ್ಪೂನ್

ಜೀರಿಗೆ ಪುಡಿ 1 ಟೀಸ್ಪೂನ್

ಉಪ್ಪು 1 ಟೀಸ್ಪೂನ್

ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್

ಎಗ್ ಮಸಾಲ ಪುಡಿ 1 ಟೀಸ್ಪೂನ್

ಕೊತ್ತಂಬರಿ ಸೊಪ್ಪು ಸ್ವಲ್ಪ
Saakshatv cooking recipe Egg palya

ಮಾಡುವ ವಿಧಾನ

ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಸೇರಿಸಿ. ಅದು ಬಿಸಿಯಾದ ನಂತರ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮ್ಯಾಟೊ, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮತ್ತು ಅದನ್ನು ಸರಿಯಾಗಿ ಬೆರೆಸಿ.
ಕಸೂರಿ ಮೇಥಿ ಇದ್ದರೆ ಅದನ್ನು ಸೇರಿಸಿ.

ಈಗ ಎಲ್ಲಾ 4 ಮೊಟ್ಟೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಿಧಾನವಾಗಿ ಬಾಣಲೆಗೆ ಸೇರಿಸಿ. ಈಗ ಅದಕ್ಕೆ ಎಗ್ ಮಸಾಲ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ನಿಧಾನವಾಗಿ ಕಲಸಿ. ಮೊಟ್ಟೆಯ ಪ್ರತಿಯೊಂದು ಭಾಗದಲ್ಲೂ ಮಸಾಲೆ ಬೆರೆಯುವಂತೆ ಮಿಶ್ರ ಮಾಡಿ.

ಈಗ ಅಂತಿಮವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಮೊಟ್ಟೆ ಪಲ್ಯ ಸವಿಯಲು ರೆಡಿ.

ಈ ಖಾದ್ಯವನ್ನು ನೀವು ಅನ್ನ ಮತ್ತು ಚಪಾತಿಯೊಂದಿಗೆ ಸೇವಿಸಬಹುದು.

ತಂಪಾದ ಆರೋಗ್ಯಕರ ರಾಗಿ ಅಂಬಲಿ

ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು – 3 ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಜೀರಿಗೆ ಪುಡಿ – 1/4 ಚಮಚ
ನೀರು – 2 ಕಪ್
ಮೊಸರು/ ಮಜ್ಜಿಗೆ – 1‌ಕಪ್
ರುಚಿಗೆ ತಕ್ಕಷ್ಟು ‌ಉಪ್ಪು
ಕೊತ್ತಂಬರಿ ಸೊಪ್ಪು – ಸ್ವಲ್ಪ
Saakshatv cooking recipe raagi ambali

ಮಾಡುವ ವಿಧಾನ
ಮೊದಲಿಗೆ ‌ಸ್ವಲ್ಪ ನೀರಿನಲ್ಲಿ ರಾಗಿ ಹಿಟ್ಟನ್ನು ಗಂಟಿಲ್ಲದಂತೆ ಕಲಸಿ. ಬಳಿಕ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಬಿಸಿ ಮಾಡಿ, ಅದು ಕುದಿಯಲು ಪ್ರಾರಂಭಿಸಿದಾಗ ಕಲಸಿಟ್ಟ ರಾಗಿಯ ಹಿಟ್ಟನ್ನು ಸೇರಿಸಿ. ನಿಧಾನವಾಗಿ ಕೈಯಾಡಿಸುತ್ತಾ 2-3 ನಿಮಿಷ ಕುದಿಸಿ. ಬಳಿಕ ಕೆಳಗಿಳಿಸಿ, ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ‌ಅದಕ್ಕೆ ಮೊಸರು/ಮಜ್ಜಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಉಪ್ಪು ಸೇರಿಸಿದರೆ ಆರೋಗ್ಯಕರ ರಾಗಿ ಅಂಬಲಿ ಸಿದ್ದ.

ಮಸ್ಕ್ ಮೆಲನ್ ಜ್ಯೂಸ್ ( ಕರಬೂಜ ಹಣ್ಣಿನ ಜ್ಯೂಸ್)

ಬೇಕಾಗುವ ಸಾಮಗ್ರಿಗಳು
ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣಿನ ಹೋಳುಗಳು – 1 ಕಪ್
ಹಾಲು – 1 ಕಪ್
ಮಿಲ್ಕ್ ಮೇಡ್ – 1/2 ಕಪ್
ಸಣ್ಣಗೆ ಕತ್ತರಿಸಿದ ಬಾದಾಮಿ, ಪಿಸ್ತಾ ಸ್ವಲ್ಪ
Saakshatv cooking recipe musk melon juice

ಮಾಡುವ ವಿಧಾನ
ಮೊದಲಿಗೆ ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣಿನ ಹೋಳುಗಳನ್ನು ಹಾಲು, ಮಿಲ್ಕ್ ಮೇಡ್ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ . ನಂತರ ಅದಕ್ಕೆ ‌ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ‌ಸೇರಿಸಿ.
ಐಸ್ ಪೀಸ್ ಗಳನ್ನು ಹಾಕಿ ರುಚಿರುಚಿಯಾದ ತಣ್ಣಗಿರುವ ಮಸ್ಕ್ ಮೆಲನ್ ಜ್ಯೂಸ್ ಅನ್ನು ಸವಿಯಿರಿ.

ಪನೀರ್ ಫ್ರೈಡ್ ರೈಸ್

ಬೇಕಾಗುವ ಪದಾರ್ಥಗಳು
ಬಾಸ್ಮತಿ ಅನ್ನ – 2 ಕಪ್
ಪನೀರ್ ಚೂರುಗಳು ‌- 1ಕಪ್
2 ಚಮಚ ಟೊಮೆಟೊ ಕೆಚಪ್,
2 ಚಮಚ ಸೋಯಾ ಸಾಸ್,
2 ಚಮಚ ಚಿಲ್ಲಿ ಸಾಸ್,
2 ಚಮಚ ಕಾರ್ನ್ ಪೌಡರ್,
1 ಚಮಚ ಮೆಣಸಿನ ಪುಡಿ,
ರುಚಿಗೆ ತಕ್ಕಷ್ಟು ಉಪ್ಪು
ತರಕಾರಿಗಳು (ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಹೂಕೋಸು, ಕ್ಯಾಪ್ಸಿಕಂ)
Saakshatv cooking recipe Paneer fried rice

ಮಾಡುವ ವಿಧಾನ

ಒಂದು ಬೌಲ್ ನಲ್ಲಿ 1ಚಮಚ ಟೊಮೆಟೊ ಕೆಚಪ್, 1ಚಮಚ ಸೋಯಾ ಸಾಸ್, 1ಚಮಚ ಚಿಲ್ಲಿ ಸಾಸ್, 1ಚಮಚ ಕಾರ್ನ್ ಪೌಡರ್, 1/2 ಚಮಚ ಮೆಣಸಿನ ಪುಡಿ, ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ಮಿಶ್ರಣವನ್ನು ತಯಾರಿಸಿ. ನಂತರ ಅದಕ್ಕೆ ಪನೀರ್ ಚೂರುಗಳನ್ನು ಸೇರಿಸಿ ಮತ್ತು 10 ನಿಮಿಷ ಮ್ಯಾರಿನೇಟ್ ಮಾಡಿ.
ನಂತರ ತವಾ ಬಿಸಿ ಮಾಡಿ ಎಣ್ಣೆಯನ್ನು ಸೇರಿಸಿ, ಪನೀರ್ ಚೂರುಗಳನ್ನು ಫ್ರೈ ಮಾಡಿ, ಅದನ್ನು ಪಕ್ಕಕ್ಕೆ ಇರಿಸಿ.
ಬಳಿಕ ಒಂದು ಕಡಾಯಿ ತೆಗೆದುಕೊಂಡು, ಎಣ್ಣೆಯನ್ನು ಬಿಸಿ ಮಾಡಿ, ಕತ್ತರಿಸಿದ ತರಕಾರಿಗಳನ್ನು ಸೇರಿಸಿ (ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಹೂಕೋಸು, ಕ್ಯಾಪ್ಸಿಕಂ) ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿ.

Saakshatv cooking recipe Paneer fried rice
ನಂತರ ಅದಕ್ಕೆ 1ಚಮಚ ಸೋಯಾ ಸಾಸ್, 1 ಚಮಚ ಚಿಲ್ಲಿ ಸಾಸ್, 1 ಚಮಚ ಟೊಮೆಟೊ ಕೆಚಪ್, 1/2 ಚಮಚ ಮೆಣಸು ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಬಳಿಕ ಬಾಸ್ಮತಿ ಅನ್ನವನ್ನು ಸೇರಿಸಿ. ಅದನ್ನು ನಿಧಾನವಾಗಿ ಬೆರೆಸಿ. ಅಂತಿಮವಾಗಿ ಹುರಿದ ಪನೀರ್ ಮತ್ತು ಹುರಿದ ಈರುಳ್ಳಿ ಸೇರಿಸಿ. ಯಾವುದೇ ಗ್ರೇವಿ ಅಥವಾ ಕೆಚಪ್ ನೊಂದಿಗೆ ಸವಿಯಿರಿ..

ಸೋರೆಕಾಯಿ ಚಟ್ನಿ

ಬೇಕಾಗುವ ಸಾಮಾಗ್ರಿಗಳು

ಕಡಲೆಬೇಳೆ – ಸ್ವಲ್ಪ
ಉದ್ದಿನ ಬೇಳೆ – ಸ್ವಲ್ಪ
ಕೊಬ್ಬರಿ ತುರಿ – 1/2 ಕಪ್
ಒಣಮೆಣಸಿನಕಾಯಿ – 4
ಇಂಗು – ಚಿಟಿಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸೋರೆಕಾಯಿ ತುಂಡುಗಳು – 1 ಬಟ್ಟಲು
ಹುಣಸೆ ಹಣ್ಣು, ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ

ಮೊದಲಿಗೆ ಸೋರೆಕಾಯಿ ತುಂಡುಗಳನ್ನು ಬೇಯಿಸಿ ಇಟ್ಟು ಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಬೇಳೆ, ಉದ್ದಿನ ಬೇಳೆ, ಕೊಬ್ಬರಿ ತುರಿ, ಒಣಮೆಣಸಿನಕಾಯಿ, ಇಂಗು ಗಳನ್ನು ಹುರಿದು ತೆಗೆಯಿರಿ.
Saakshatv cooking recipe sorekayi chutney

ತಣ್ಣಗಾದ ನಂತರ ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು, ಉಪ್ಪು ಸೇರಿಸಿ ರುಬ್ಬಿ . ಸ್ವಲ್ಪ ‌ನುಣ್ಣಗಾದ ಬಳಿಕ ಬೇಯಿಸಿ ಇಟ್ಟುಕೊಂಡ ಸೋರೆಕಾಯಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ.
ಇದನ್ನು ‌ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕಣ್ಣಿಗೆ ಒಳ್ಳೆಯದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd