ಸೋನಾಲಿ ಪೊಗಟ್ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ – ದೇಹದ ಮೇಲೆ ಗಾಯದ ಗುರುತು..
ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರ ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಿದ್ದು, ಆಕೆಯ ದೇಹದ ಮೇಲೆ ಗಾಯಗಳಾಗಿವೆ ಎಂದು ಉಲ್ಲೇಖಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಗೋವಾ ಪೊಲೀಸರು ಇಬ್ಬರು ಸಹಚರರ ವಿರುದ್ಧ ಕೊಲೆ ಆರೋಪ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ 42 ವರ್ಷದ ಬಿಜೆಪಿ ನಾಯಕಿ ಸಾವಿಗೆ ಸಂಬಂಧಿಸಿದ ಪ್ರಕರಣಕ್ಕೆ ಕೇಸ್ ದಾಖಲಿಸಲಾಗಿದೆ. ಆಗಸ್ಟ್ 22 ರಂದು ಸೋನಾಲಿ ಫೋಗಟ್ ಗೋವಾಕ್ಕೆ ಆಗಮಿಸಿದಾಗ ಅವರ ಜೊತೆಗಿದ್ದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೋಗಟ್ ಸಹೋದರ ರಿಂಕು ಢಾಕಾ ಬುಧವಾರ ಅಂಜುನಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಗುರುವಾರ ಗೋವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಫೋಗಟ್‌ನ ಶವದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಸಹೋದರ ರಿಂಕು ಢಾಕಾ ತನ್ನ ಸಹೋದರಿಯ ಸಾವು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. “ಮಂಗಳವಾರ ಸಂಜೆ ಗೋವಾ ಬಂದ ನಂತರ ನಾನು ಸ್ವಂತವಾಗಿ ಒಂದಿಷ್ಟು ವಿಚಾರಣೆ ನಡಸಿದ್ದೇನೆ ಇದು ಸಾಮಾನ್ಯ ಸಾವಲ್ಲ ಎಂದಿದ್ದಾರೆ.
ಅವರು ಸೋನಾಲಿ ಫೋಗಟ್‌ನ ಮ್ಯಾನೇಜರ್ ಸುಧೀರ್ ಸಂಗ್ವಾನ್ ಮತ್ತು ಒಬ್ಬ ಸುಖ್ವಿಂದರ್ ಸಿಂಗ್ ಅವರ ಮೇಲೆ ಅತ್ಯಾಚಾರ ಮಾಡಿ ಕೊಲೆ ಆರೋಪ ಹೊರಿಸಿದ್ದಾರೆ. “ಅವರು ಅನೇಕ ದಿನಗಳಿಂದ ಇದನ್ನ ಪ್ಲಾನ್ ಮಾಡಿದ್ದಾರೆ. ಕೊಲೆ ನಡೆದ ದಿನ ಆಕೆ ತನ್ನ ತಾಯಿ, ತಂಗಿ, ನನ್ನ ಹಾಗೂ ಇತರರ ಜತೆ ಮಾತನಾಡಿದ್ದಾಳೆ. ಆಕೆಯ ಸಂಭಾಷಣೆಗಳಿಂದ ಆಕೆ ಸಂಕಷ್ಟಕ್ಕೆ ಸಿಲುಕಿದ್ದು, ಯಾವಾಗಾ ಏನ್ ಬೇಕಾದ್ರೂ ಆಗಬಹುದು ಎಂಬುದು ಖಚಿತವಾಗಿದೆ. ನಾವು ಆಕೆಗೆ ದೂರವಿರಲು ಹೇಳುತ್ತಿದ್ದೆವು ಮತ್ತು ಪೊಲೀಸ್ ಕಂಪ್ಲೆಟ್ ಕೊಡಲು ಹೇಳಿದ್ದೆವು. ಆದರೆ ಅದೇ ರಾತ್ರಿ ಅವರು ನಿಧನದರಾದರು ಎಂದು ಸಹೋದರ ಹೇಳಿದ್ದಾನೆ.