ರೀಲ್ ಲೈಫ್ ನಲ್ಲಿ ವಿಲ್ಲನ್ ಆದ್ರೂ ರಿಯಲ್ ಲೈಫ್ ಹೀರೋ ಸೋನು ಸೂದ್ ಸಾಮಾಜಕ ಕಾರ್ಯಗಳಿಂದಲೇ ಜನರ ಪ್ರೀತಿಗಳಿಸಿದ್ದಾರೆ. ಸೋನು ಸೂದ್ ಇತ್ತೀಚೆಗಷ್ಟೇ ಖ್ಯಾತ ಕಾಮಿಡಿ ಶೋ ‘ದಿ ಕಪಿಲ್ ಶರ್ಮಾ’ದಲ್ಲು ಭಾಗವಹಿಸಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಆದ್ರೆ ಈ ಶೋನಲ್ಲಿ ಸೋನು ಕಣ್ಣೀರಿಟ್ಟಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪಲು ಸಹಾಯ ಮಾಡಿದ್ದರು ಸೋನು. ಯಾರಾದ್ರೂ ಸಹಾಯ ಅಂತ ಕೀಳಿದ್ದು ಗೊತ್ತಾದ್ರೆ ಸಾಕು ಅವರಿಗೆ ನೆರವಾಗುವಲ್ಲಿ ಮುಂಚುಣಿಯಲ್ಲಿರುವ ಸೋನು ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟಿದ್ದು, ಈ ವಿಚಾರ ಪ್ರೋಮೋಗಳ ಮೂಲಕ ಬೆಳಕಿಗೆ ಬಂದಿದೆ. ಕಾರ್ಯಕ್ರಮದಲ್ಲಿ ಸೋನು ಸೂದ್ಗೆ ವಿಶೇಷ ಉಡುಗೊರೆಯನ್ನು ಕಪಿಲ್ ಶರ್ಮಾ ಶೋ ನ ತಂಡ ನೀಡಿದೆ. ಸೋನು ಸೂದ್ ಸಹಾಯ ಮಾಡಿದ ವ್ಯಕ್ತಿಗಳು ಸೋನು ಸೂದ್ಗೆ ಧನ್ಯವಾದ ತಿಳಿಸಿದ ವಿಡಿಯೋವನ್ನು ಶೋ ನಲ್ಲಿ ಪ್ರಸಾರ ಮಾಡಲಾಗಿದೆ. ತಮ್ಮನ್ನು ಹರಸಿದ ಜನರನ್ನು ಕಂಡು ಸೋನು ಸೂದ್ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
6200+ ಸ್ಕ್ರೀನ್ಗಳಲ್ಲಿ ಬರಲಿದೆ ಆದಿಪುರುಷ್
ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ದೇಶಾದ್ಯಂತ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ದೇಶದ ಅತಿದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಈಗ ತೆರೆಗೆ ಬರಲು ಸಜ್ಜಾಗಿದೆ. ಕನ್ನಡ,...