ದಕ್ಷಿಣ ಕೊರಿಯಾದ ಹ್ಯಾಲೋವೀನ್ ದುರಂತದಲ್ಲಿ ನಟ, ಗಾಯಕ ಲೀ ಜಿಹಾನ್ ನಿಧನ…
ದಕ್ಷಿಣ ಕೊರಿಯಾದ ಸಿಯೋಲ್ನ ಇಟಾವಾನ್ ನಗರದಲ್ಲಿ ನಡೆದ ಹ್ಯಾಲೋವೀನ್ ಕಾಲ್ತುಳಿತದಲ್ಲಿ ಕೊರಿಯಾದ ನಟ ಮತ್ತು ಗಾಯಕ ಲೀ ಜಿಹಾನ್ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನನ 935 ಎಂಟರ್ಟೈನ್ಮೆಂಟ್ ಧೃಡಪಡಿಸಿದೆ.
ಶನಿವಾರ ನಡೆದ ಈ ಭೀಕರ ಘಟನೆಯಲ್ಲಿ 151 ಮಂದಿ ಸಾವನ್ನಪ್ಪಿದ್ದು, 82 ಮಂದಿ ಗಾಯಗೊಂಡಿದ್ದರು. ಸಿಯೋಲ್ನ ಇಟಾವೊನ್ ಜಿಲ್ಲೆಯಲ್ಲಿ ನಡೆದ ಹ್ಯಾಲೋವೀನ್ ಪಾರ್ಟಿಯಲ್ಲಿ ಸಾವಿರಾರು ಜನರು ಕಿರಿದಾದ ರಸ್ತೆಯಲ್ಲಿ ಸೇರಿದ್ದಾಗ ಕಾಲ್ತುಳಿತ ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದರು.
“935 ಎಂಟರ್ಟೈನ್ಮೆಂಟ್ ಮತ್ತು 9 ಅಟೊ ಎಂಟರ್ಟೈನ್ಮೆಂಟ್ನ ಕುಟುಂಬದ ಸದಸ್ಯರಾದ ನಟ ಲೀ ಜಿಹಾನ್ ಅವರು ನಮ್ಮನ್ನೆಲ್ಲ ತೊರೆದಿದ್ದಾರೆ. ನಟನ ಹಠಾತ್ ನಿಧನದಿಂದ ತೀವ್ರ ದುಃಖದಲ್ಲಿರುವ ಅವರ ಕುಟುಂಬಕ್ಕೆ ನಾವು ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇವೆ. ” ಎಂದು 935 ಎಂಟರ್ಟೈನಮೆಂಟ್ ತಿಳಿಸಿದೆ.
South Korean actor, singer Lee Jihan dies in Seoul Halloween stampede