ಅಪ್ರಾಪ್ತೆಯ ಕೈ ಹಿಡಿದು, ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ : ಬಾಂಬೆ ಹೈಕೋರ್ಟ್ : ಆದೇಶ ತಡೆಹಿಡಿದ ಸುಪ್ರೀಂ ಕೋರ್ಟ್..!
ನವದೆಹಲಿ : ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್ ನಾಗ್ಪುರ ನ್ಯಾಯಪೀಠವು ನೀಡಿದ್ದ ತೀರ್ಪೊಂದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾದ ಹಿನ್ನೆಲೆ ಸುಪ್ರೀಂ ಕೋರ್ಟ್ ತೀರ್ಪನ್ನ ರದ್ದುಗೊಳಿಸಿದೆ.
ಹೌದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರ ನೇತೃತ್ವದ ನ್ಯಾಯಪೀಠ ಈ ಆದೇಶವನ್ನು ತಡೆಹಿಡಿದಿದೆ. ಸದ್ಯ, ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠ ಜನವರಿ 19 ರಂದು ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಎಜಿಗೆ ಅನುಮತಿ ನೀಡಿದೆ.
ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್ ಮಾಡಿದ..!
ತೀರ್ಪಿನಲ್ಲಿ ಏನಿತ್ತು..!
ಈ ತೀರ್ಪಿನ ಪ್ರಕಾರ ಅಪ್ರಾಪ್ತ ಬಾಲಕಿಯ ಕೈ ಹಿಡಿದು ಪ್ಯಾಂಟ್ ಜಿಪ್ ತೆಗೆಯುವುದು ಪೋಕ್ಸೊ ಅಡಿಯಲ್ಲಿ ಲೈಂಗಿಕ ದೌರ್ಜನ್ಯವಲ್ಲ ಎಂದು ತೀರ್ಪು ನೀಡಿದೆ. ಅಲ್ದೇ ಈ ಪ್ರಕರಣವನ್ನು ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ದಾಖಲಿಸಲಾಗುವುದು ಎಂದು ತಿಳಿಸಿದೆ.
ದೆಹಲಿ ಹಿಂಸಾಚಾರ: ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ..!
ನ್ಯಾಯಮೂರ್ತಿ ಪುಷ್ಪಾ ಗಣೆದಿವಾಲಾ ಅವರ ಏಕ ಸದಸ್ಯ ಪೀಠವು 50 ವರ್ಷದ ವ್ಯಕ್ತಿಯೊಬ್ಬ 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶವನ್ನು ಹೊರಡಿಸಿದೆ. ಅಪ್ರಾಪ್ತ ಬಾಲಕಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಪ್ಯಾಂಟ್ ಜಿಪ್ ತೆರೆಯುವಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಅತ್ತೆಯ ಕಣ್ಣು ಕಿತ್ತು ಹೊರಹಾಕಿ , ಭೀಕರವಾಗಿ ಹತ್ಯೆ ಮಾಡಿದ ಸೊಸೆ : ಕಾರಣ..!
ಈ ಸಂಬಂಧ, ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಪೋಕ್ಸೊ ಸೆಕ್ಷನ್ 10 ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 25 ಸಾವಿರ ರೂ. ದಂಡವನ್ನು ವಿಧಿಸಬೇಕು ಎಂದು ಆದೇಶ ನೀಡಿದೆ. ಆದರೇ, ಇದೇ ವೇಳೆ ನೇರ ದೈಹಿಕ ಸಂಪರ್ಕ ಅಥವಾ ಸ್ಪರ್ಶಿಸುವುದು, ಸ್ತ್ರೀಯ ಗುಪ್ತಾಂಗವನ್ನು ಪ್ರವೇಶಿಸುವುದನ್ನು “ಲೈಂಗಿಕ ಸಂಪರ್ಕ” ಎಂದು ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರ ಏಕ ಸದಸ್ಯ ನ್ಯಾಯಪೀಠವು ವಿವರಣೆ ನೀಡಿದೆ.
ತಾಯಿಯಾದ ಬಳಿಕ ಅಪ್ರಾಪ್ತೆಯನ್ನ ಮದುವೆಯಾಗಲು ಒಪ್ಪಿದ ವಿವಾಹಿತ ಆರೋಪಿಗೆ ಜಾಮೀನು..!
ಈ ಪ್ರಕರಣವು ಐಪಿಸಿ ಸೆಕ್ಶನ್ 354 ಎ (1) (ಐ) ಅಡಿಯಲ್ಲಿ ಬರುವ ಕಾರಣ ಪೋಕ್ಸೊ ಕಾಯ್ದೆಯ ಸೆಕ್ಷನ್ 8, 10 ಮತ್ತು 12 ರ ಅಡಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಿ ಐಪಿಸಿಯ ಸೆಕ್ಷನ್ ಆರೋಪಿಯನ್ನು ಮೂರು ವರ್ಷಗಳ ಅವಧಿಗೆ ಜೈಲಿಗೆ ಹಾಕಲಾಗುವುದು ಎಂದು ತೀರ್ಪು ನೀಡಿದೆ.
ಕಾಂಗ್ರೆಸ್ ಜಾರಿಗೊಳಿಸಿರುವ ಕಾಯ್ದೆಗಳನ್ನು ಕೊಲ್ಲುವುದೇ ನಮ್ಮ ಮೋದಿ ಜೀ ಉದ್ದೇಶ : ರಾಹುಲ್ ರಾಂಧಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel