Tamil Actress Deepa Suicide – ಯುವ ನಟಿ ಆತ್ಮಹತ್ಯೆ | ಫ್ಲಾಟ್ ನಲ್ಲಿ ಪತ್ತೆ ಆಯ್ತು ಮೃತದೇಹ
ಆತ್ಮಹತ್ಯೆ ಮಾಡಿಕೊಂಡ ನಟಿ ದೀಪಾ
ಫ್ಲಾಟ್ ನಲ್ಲಿ ಪತ್ತೆ ಆಯ್ತು ಮೃತದೇಹ
ಪ್ರೀತಿ- ಪ್ರೇಮ ವಿಚಾರವೇ ಆತ್ಮಹತ್ಯೆಗೆ ಕಾರಣ
ಸೂಸೈಡ್ ನೋಟ್ ಕೂಡ ಫ್ಲಾಟ್ ನಲ್ಲಿ ಪತ್ತೆ
ಚೆನ್ನೈ : ಕಾಲಿವುಡ್ ನ ಯುವ ನಟಿ ದೀಪಾ ಅಲಿಯಾಸ್ ಪಾಲಿನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೆನ್ನೈನ ಖಾಸಗಿ ಫ್ಲಾಟ್ ನಲ್ಲಿ ವಾಸಿಸುತ್ತಿದ್ದ ದೀಪಾ ಶನಿವಾರದಂದು ತಮ್ಮ ನಿವಾಸದಲ್ಲಿ ನೀಣಿಗೆ ಶರಣಾಗಿದ್ದಾರೆ.
ಪ್ರೀತಿ ವಿಚಾರದಲ್ಲಿ ದೀಪಾ ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದು, ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಶನಿವಾರ ನಟಿ ದೀಪಾ ಕುಟುಂಬಸ್ಥರ ಫೋನ್ ರಿಸೀವ್ ಮಾಡಿರಲಿಲ್ಲ. ಬಳಿಕ ಕುಟುಂಬಸ್ಥರು ದೀಪಾ ಅವರ ಸ್ನೇಹಿತ ಪ್ರಭಾಕರನ್ ಅವರಿಗೆ ಕರೆ ಮಾಡಿದ್ದಾರೆ.
ಹೀಗಾಗಿ ಫ್ಲಾಟ್ ಗೆ ಪ್ರಭಾಕರನ್ ಬಂದು ನೋಡಿದಾಗ ದೀಪಾ ನೇಣು ಬಿಗಿದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಕೂಡಲೇ ಪ್ರಭಾಕರನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇನ್ನು ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ.
ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ಜೀವನ ಪರ್ಯಂತ ಅವರನ್ನು ಪ್ರೀತಿಸುತ್ತಲೇ ಇರುತ್ತೇವೆ ಎಂದು ಬರೆದುಕೊಂಡಿದ್ದಾರೆ.