ತಮಿಳಿನ ಖ್ಯಾತ ಹಾಸ್ಯ ನಟ ಅಯ್ಯಪ್ಪನ್ ಗೋಪಿ ಹೃದಯಾಘಾತನಿಂದ ನಿಧನ
ಖ್ಯಾತ ತಮಿಳಿನ ಹಾಸ್ಯ ನಟ ಅಯ್ಯಪ್ಪನ್ ಗೋಪಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಜನಿ ಮುರುಗನ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಟ ಅಯ್ಯಪ್ಪನ್ ಗೋಪಿ ನಿಧನಕ್ಕೆ ಕಾಲಿವುಡ್ ನ ಅನೇಕರು ಸಂತಾಪ ಸೂಚಿಸಿದ್ದಾರೆ.
ಇತ್ತೀಚಿಗಷ್ಟೆ ನಟ ಅಯ್ಯಪ್ಪನ್ ಗೋಪಿ ಸ್ನೇಹಿತ ಮತ್ತು ನಟ ಪವನ್ ರಾಜ್ ನಿಧನರಾದ ಬೆನ್ನಲ್ಲೇ ಅಯ್ಯಪ್ಪನ್ ಕೂಡ ಕೊನೆಯುಸಿರೆಳೆದಿದ್ದಾರೆ. ಅಯ್ಯಪ್ಪನ್ ಅವರು , ಮುರುಗನ್, ಧುಲ್ಲಕು ದುಡ್ಡು ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ ಕಾಮಿಡಿ ಮೂಲಕ ಮನರಂಜಿಸಿದ್ಧಾರೆ.
ಇತ್ತೀಚೆಗೆ ದಕ್ಷಿಣ ಭಾರತದ ಅನೇಕ ಕಲಾವಿಧರು ಕೊನೆಯುಸಿರೆಳೆದಿದ್ದಾರೆ.. ಕೆಲವರು ಕೋವಿಡ್ ಗೆ ಬಲಿಯಾಗಿದ್ದರೆ.. ಇನ್ನೂ ಕೆಲವರು ನಾನಾ ಕಾರಣಗಳಿಂದ ನಿಧನರಾಗಿದ್ದು, 2020- 2021 ಸಿನಿಮಾರಂಗದ ಪಾಲಿಗೆ ಕರಾಳ ವರ್ಷವೇ ಎಂದ್ರು ತಪ್ಪಾಗಲಾರದು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.