ಕಿರುತೆರೆ ನಟಿ ಕವಿತಾ ಚೌಧರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಉಡಾನ್ ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಎಂಬ ಪಾತ್ರ ನಿರ್ವಹಿಸಿ ಪ್ರಸಿದ್ಧಿ ಪಡೆದಿದ್ದ ಅವರು ತಮ್ಮ 67ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 80ರ ದಶಕದಲ್ಲಿ ಸರ್ಫ್ ಡಿಟರ್ಜೆಂಟ್ ಜಾಹೀರಾತುಗಳಲ್ಲಿ ಲಲಿತಾಜಿ ಎಂಬ ಪಾತ್ರ ಮಾಡಿ ಮನೆ ಮಾತಾಗಿದ್ದರು.
ಸೋದರಳಿಯ ಅಜಯ್ ಸಾಯಲ್ ಸಾವಿನ ಕುರಿತು ಮಾಹಿತಿ ನೀಡಿದ್ದಾರೆ. ನಟಿ ಅಲ್ಲದೇ, ನಿರ್ದೇಶಕಿಯಾಗಿಯೂ ಕವಿತಾ ಚೌಧರಿ ಗುರುತಿಸಿಕೊಂಡಿದ್ದರು. ಉಡಾನ್ ಧಾರಾವಾಹಿಗೆ ಕವಿತಾ ಚೌಧರಿ ನಿರ್ದೇಶನ ಮಾಡಿದ್ದರು.