ಅಭಿಮಾನಿಯ ಅಸಭ್ಯ ವರ್ತನೆಗೆ ತೆಲುಗು ಮಗಧೀರ ನಟಿ ಕಾಜಲ್ ಅಗರ್ವಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯ ಅಸಭ್ಯ ವರ್ತನೆ ಕಂಡು ಬೇಸರಿಸಿಕೊಂಡಿದ್ದಾರೆ. ನಟಿ ಶಾಪಿಂಗ್ ಮಾಲ್ ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲ ಕೌಂಟರ್ ಗಳಲ್ಲಿ ಜನರು ತುಂಬಿಕೊಂಡಿದ್ದರು. ಕಾಜಲ್ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ಕೊಟ್ಟು, ಕೆಲ ಅಭಿಮಾನಿಗಳು ಸೆಲ್ಫಿ ಕೇಳಿದರೆ ಅವರ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಡಿಸಿದ್ದರು. ಈ ಸಂದರ್ಭದಲ್ಲಿಯೇ ವ್ಯಕ್ತಿಯೊಬ್ಬ ಅತಿರೇಕ ವರ್ತನೆ ತೋರಿದ್ದಾನೆ.
ಸೆಲ್ಫಿ ಕೇಳಲು ಬಂದಾಗ ಕಾಜಲ್ ಸೊಂಟಕ್ಕೆ ಕೈ ಹಾಕಿ ಪೋಸ್ ನೀಡಲು ಹೋಗಿದ್ದಾನೆ. ಆಗ ಕಾಜಲ್ ಶಾಕ್ ಆಗಿದ್ದಾರೆ. ಕೂಡಲೇ ಬೌನ್ಸರ್ಸ್ ಆತನನ್ನು ದೂರ ಸರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವರ್ತನೆಗೆ ಬೇಸರ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ನಟಿ ಕಮಲ್ ಹಾಸನ್ ನಟನೆಯ ಇಂಡಿಯನ್ 2, ಸತ್ಯಭಾಮ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆಯೇ ಈ ಘಟನೆ ನಡೆದಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.