ಶೂಟಿಂಗ್ ವೇಳೆಯೇ ಕಲಾ ನಿರ್ದೇಶಕ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಶೂಟಿಂಗ್ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಿದ್ದ ಕಲಾ ನಿರ್ದೇಶಕ ಮಿಲನ್ ಫರ್ನಾಂಡಿಸ್ (Milan Fernandes) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ತಮಿಳು ಸಿನಿಮಾ ರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಇವರು, ಅಜಿತ್ ಕುಮಾರ್ (Ajith Kumar) ನಟನೆಯ ಹೊಸ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದರು. ಆದರೆ, ಭಾನುವಾರ ಬೆಳಿಗ್ಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಎಲ್ಲರೂ ಶೂಟಿಂಗ್ ಮುಗಿಸಿ ಹೊಟೇಲ್ ಗೆ ಬಂದಗಿದ್ದರು. ಮಲಗಿದ್ದಾಗ ಅವರ ದೇಹ ಕೋಲ್ಡ್ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಇವರು ಕೆಲಸ ಮಾಡಿದ್ದರು. a