ನಿಮಗೆ ಇಷ್ಟವಾಗುವ ಸುದ್ದಿಗಳಿವು…! : Human intresting , stories
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ಮಲೆನಾಡಿನ ನಾಗರಹಳ್ಳಿಯ ಅಮೋಘ ವಿನೂತನ ಚತುರ್ಮುಖ ಶಿಲಾಶಾಸನದ ವಿವರಣೆಯ ಕೌತುಕದ ಸಂಗತಿಗಳು:
ಮಲೆನಾಡಿನ ನಾಗರಹಳ್ಳಿಯ ಅಮೋಘ ವಿನೂತನ ಚತುರ್ಮುಖ ಶಿಲಾಶಾಸನದ ವಿವರಣೆಯ ಕೌತುಕದ ಸಂಗತಿಗಳು: Saakshatv Naavu kelada charitre episode14
ನಮ್ಮ ಮಲೆನಾಡು ಬೇರೆ ಬೇರೆ ಕಾಲಮಾನದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಕದಂಬ, ವರ್ಧನ, ಆಳುಪ, ರಾಷ್ಟ್ರಕೂಟ, ಚಾಳುಕ್ಯ, ಸಾಂತಳಿಗೆ ಚಾಳುಕ್ಯ, ಗಂಗರು, ಸಾಂತರು, ಹೊಯ್ಸಳ, ಸೇಉಣ (ಯಾದವ), ಪಲ್ಲವ – ಕಾಡವ, ವಿಜಯನಗರ, ಕೆಳದಿ ಮತ್ತು ಮೈಸೂರಿನ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. Saakshatv Naavu kelada charitre episode14
ಇನ್ನೂ ನಮ್ಮ ಶಿವಮೊಗ್ಗಕ್ಕೆ ಸಂಬಂಧಿಸಿದಂತೆ ಮಲೆನಾಡಿನ ತೀರ್ಥಹಳ್ಳಿ ಮತ್ತು ಹೊಸನಗರ ವಿಜಯನಗರ ಸಾಮ್ರಾಜ್ಯದ ಬಹು ಮುಖ್ಯ ಭಾಗವಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಕರಾವಳಿ ಮತ್ತು ಮಲೆನಾಡನ್ನು ಆರಗದಿಂದ ನಿಯಂತ್ರಿಸಲು ಒಬ್ಬ ರಾಜ್ಯಪಾಲರನ್ನು ನೇಮಿಸಲಾಗಿತ್ತು. ವಿಜಯನಗರಕ್ಕೆ ಅತಿ ಹೆಚ್ಚು ಆದಾಯ ತರುತ್ತಿದ್ದ ಈ ಪ್ರದೇಶದ ರಾಜ್ಯಪಾಲರನ್ನಾಗಿ ಬಹುಪಾಲು ವಿಜಯನಗರದ ರಾಯರ ವಂಶಸ್ಥರನ್ನೇ ನೇಮಿಸಲಾಗುತ್ತಿತ್ತು. ಇನ್ನೂ ಮಲೆನಾಡಿನ ಪರಿಸರದಲ್ಲಿ ತಯಾರಾಗುತ್ತಿದ್ದ ಅತ್ಯಾಧುನಿಕ ತಂತ್ರಜ್ಞಾನದ ಆಯುಧಗಳು ವಿಜಯನಗರ ರಾಯರಿಗೆ ಸಾಕಷ್ಟು ಯುದ್ಧಗಳಲ್ಲಿ ಜಯವನ್ನು ತಂದುಕೊಟ್ಟಿತ್ತು. ವಿಜಯನಗರ ರಾಯರ ಆಳ್ವಿಕೆಯ ಕಾಲದಲ್ಲಿ ಮಲೆನಾಡಿನ ಪರಿಸರದಲ್ಲಿ ಬೇರೆ ಬೇರೆ ಲಕ್ಷಣವುಳ್ಳ ಲೋಹಗಳಿಗಾಗಿ ಹಲವಾರು ಸ್ಥಳಗಳಲ್ಲಿ ಗಣಿಗಾರಿಕೆ ಮಾಡಲಾಗುತ್ತಿತ್ತು.
ವಿಶೇಷವಾದ ಈ ಕುಂಕುಮ ಹಚ್ಚಿ ಈ ಮಂತ್ರ ಹೇಳಿದ್ರೆ ದೇವಿ ಕೃಪೆ ದೊರೆಯುತ್ತದೆ
ವಿಶೇಷವಾದ ಈ ಕುಂಕುಮ ಹಚ್ಚಿ ಈ ಮಂತ್ರ ಹೇಳಿದ್ರೆ ದೇವಿ ಕೃಪೆ ದೊರೆಯುತ್ತದೆ
ವಿಶೇಷವಾದ ಈ ಕುಂಕುಮ ಹಚ್ಚಿಕೊಳ್ಳುವುದರಿಂದ ಮಹಾಲಕ್ಷ್ಮಿ ಅನುಗ್ರಹ ನಿಮಗೆ ದೊರೆಯುತ್ತದೆ. ನಮಸ್ತೆ ಗೆಳೆಯರೆ ಮನೆಯಲ್ಲಿ ಹೆಣ್ಣು ಮಕ್ಕಳು ಈ ರೀತಿ ವಿಶೇಷವಾದ ರೀತಿಯಲ್ಲಿ ಕುಂಕುಮವನ್ನು ಹಚ್ಚಿದರೆ ಮನೆಯಲ್ಲಿ ಇರುವ ಎಲ್ಲರನ್ನೂ ಆಕರ್ಷಿಸುತ್ತಾರೆ ಹಾಗೂ ಆ ಹೆಣ್ಣುಮಕ್ಕಳಿಗೂ ಕೂಡ ಪ್ರಶಾಂತತೆ
ಪ್ರಪಂಚದ ಅಸಹ್ಯ, ಕೆಟ್ಟ ಆಹಾರ ಪದಾರ್ಥಗಳು..! ಭಾಗ -3
ಪ್ರಪಂಚದ ಅಸಹ್ಯ, ಕೆಟ್ಟ ಆಹಾರ ಪದಾರ್ಥಗಳು..! ಭಾಗ -3
ಈ ಹಿಂದೆ 2 ಭಾಗಗಳಲ್ಲಿ ಪ್ರಪಂಚದ ಕೆಟ್ಟ, ಅಸಹ್ಯ ಹಾಗೂ ವಿಚಿತ್ರ ಆಹಾರಗಳ ಪೈಕಿ 15 ಆಹಾರ ಬಗ್ಗೆ ತಿಳಿದಿದ್ದೆವು. ಇದೀಗ ಈ ಭಾಗದಲ್ಲಿ ಮತ್ತೆ 7 ಅಸಹ್ಯ ಆಹಾರಗಳ ಬಗ್ಗೆ ತಿಳಿಯೋಣ…
ಚೆರ್ರಿ ಬ್ಲಾಸಮ್ ಮೀಟ್ – ಜಪಾನ್
ಚೆರ್ರಿ ಬ್ಲಾಸಮ್ ಮೀಟ್.. ಅಂದ್ರೆ ಕುದುರೆಯ ಮಾಂಸದಿಂದ ಮಾಡಲಾಗುವ ಒಂದು ಖಾದ್ಯ. ಜಪಾನ್ ನಲ್ಲಿ ಈ ಖಾದ್ಯ ತುಂಬಾನೆ ಫೇಮಸ್. ನಿಜ ಬಹುತೇಕ ಕಡೆಗಳಲ್ಲಿ ಕುದುರೆ ಮಾಂಸವನ್ನ ತಿನ್ನಲ್ಲ. ಆದ್ರೆ ಇಲ್ಲಿ ಇದನ್ನ ಕೇವಲ ತಿನ್ನುವುದಷ್ಟೇ ಅಲ್ಲ ಹಸಿಯಾಗಿಯೇ ತಿನ್ನಲಾಗುತ್ತೆಯಂತೆ. ಹೌದು. ಸೂಶಿ ಜೊತೆಗೆ ಇಲ್ಲ ಹಾಗೆಯೇ ಇದನ್ನ ಸರ್ವ್ ಮಾಡಲಾಗುತ್ತಂತೆ. ಕೇಳೋದಕ್ಕೆ ಅಸಹ್ಯ ಹುಟ್ಟುತ್ತೆ.
ಸಂಶೋದಕ ಲೇಖಕ ಅಂಬ್ರಯ್ಯ ಮಠ ವಿರಚಿತ ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ ಐತಿಹಾಸಿಕ ಕಾದಂಬರಿ
ಸಂಶೋದಕ ಲೇಖಕ ಅಂಬ್ರಯ್ಯ ಮಠ ವಿರಚಿತ ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ ಐತಿಹಾಸಿಕ ಕಾದಂಬರಿ:
ಕೆಳದಿ ರಾಜರಲ್ಲಿ ದೀಘ೯ ಕಾಲದ ಆಡಳಿತ ಮಾಡಿದವರು, ಹೆಚ್ಚು ರಾಜ್ಯ ವಿಸ್ತಾರ ಮಾಡಿದವರು, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರನ್ನ ಉದ್ದೇಶ ಪೂವ೯ಕವಾಗಿ ಕಾಣದ ಕೈಗಳು ಬದಿಗೆ ಸರಿಸಲು ಅನೇಕ ಕಾರಣ ಇದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ 2012 ರಲ್ಲಿ ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ. ಈ ಪುಸ್ತಕ ಮೂರು ತಿಂಗಳಿಂದ ಅನೇಕ ಬಾರಿ ಕೆಲ ಅಧ್ಯಾಯಗಳನ್ನು ಓದಿ ನನಗೆ ಬೇಕಾಗಿದ್ದ ಅನೇಕ ಮಾಹಿತಿ ಮನನ ಮಾಡಿಕೊಂಡೆ.
ನಮಗರಿವಿಲ್ಲದ ಸೋಲಿಗರ ರೊಟ್ಟಿ ಹಬ್ಬವೆಂಬ ಪಾರಂಪರಿಕ ಆಚರಣೆ, ಕಟ್ಟುಪಾಡು, ಸಂಪ್ರದಾಯದ ಸೊಗಡು:
ನಮಗರಿವಿಲ್ಲದ ಸೋಲಿಗರ ರೊಟ್ಟಿ ಹಬ್ಬವೆಂಬ ಪಾರಂಪರಿಕ ಆಚರಣೆ, ಕಟ್ಟುಪಾಡು, ಸಂಪ್ರದಾಯದ ಸೊಗಡು: Marjala manthana Festival Soliga
ಜಾಗತಿಕ ಔದ್ಯಮಿಕ ಮತ್ತು ವಾಣಿಜ್ಯ ಅಭಿವೃದ್ಧಿ ಎನ್ನುವ ಮಹಾ ಸಂತೆಯಲ್ಲಿ ಕಳೆದು ಹೋದ ಸಣ್ಣಪುಟ್ಟ ಬುಡಕಟ್ಟು ಸಂಸ್ಕೃತಿಗಳೆಷ್ಟೋ! ಲೆಕ್ಕವಿಟ್ಟವರಾರು. ಗ್ಲೋಬಲ್ ಲೀಡರ್ ಶಿಪ್, ಜಿಡಿಪಿ, ಎಫ್.ಡಿ.ಐ, ವರ್ಲ್ಡ್ ಟ್ರೇಡ್, ವಾಲ್ ಮಾರ್ಟ್ ಮುಂತಾದ ಈ ಶತಮಾನದ ಹುಚ್ಚು ಸಾಯಿಸುತ್ತಿರುವುದು ನಮ್ಮ ನೆಮ್ಮದಿಯ ಬದುಕನ್ನು ಮಾತ್ರವಲ್ಲ, ನೂರಾರು ತಲೆಮಾರುಗಳಿಂದ ನಡೆದು ಬಂದಿದ್ದ ಅತ್ಯಂತ ಅಪೂರ್ವ ಸಾಂಸ್ಕೃತಿಕ ಸಿರಿವಂತಿಕೆ ಮತ್ತು ವಿಶಿಷ್ಟವಾದ ನಂಬಿಕೆ ಆಚರಣೆ ಮತ್ತು ಕಟ್ಟುಪಾಡುಗಳನ್ನು. Marjala manthana Festival Soliga
ಅಂತಹದ್ದೇ ಒಂದು ವಿರಳ ಆಚರಣೆ ನಮ್ಮ ಚಾಮರಾಜನಗರ ಜಿಲ್ಲೆಯ ಸುತ್ತಮುತ್ತಾ ಮಾತ್ರ ಹೆಚ್ಚಾಗಿ ಕಾಣಸಿಗುವ ಅರಣ್ಯವಾಸಿ ಬುಡಕಟ್ಟು ಸೋಲಿಗರ ರೊಟ್ಟಿಹಬ್ಬ. ಗ್ಲೋಬಲೈಸೇಷನ್ ಅಬ್ಬರದಲ್ಲಿ ಕರಗುತ್ತಿರುವ ರೊಟ್ಟಿಹಬ್ಬದ ಕುರಿತಾದ ವಿಶೇಷ ಕುತೂಹಲಕಾರ ಮಾಹಿತಿಗಳನ್ನು ಕಲೆಹಾಕುತ್ತಿದ್ದಾಗ ನನಗರಿವಿಲ್ಲದಂತೆ ಒಮ್ಮೆ ಅಬ್ಬಾ! ಎನ್ನುವ ಉದ್ಘಾರ ಹೊಮ್ಮಿದರೇ, ಈ ಸಂಸ್ಕೃತಿಯ ರಕ್ಷಣೆಗೆ ನಾವೇ ಮನಸು ಮಾಡುತ್ತಿಲ್ಲವಲ್ಲ ಎನ್ನುವ ನಿಟ್ಟುಸಿರು ಸಹ ಹೊರಬಿತ್ತು.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel