ಕರ್ನಾಟಕ ಸೆಲೆಬ್ರಿಟಿ ತಂಡವು ಚೆನ್ನೈ ರೈನೋಸ್ ತಂಡವನ್ನು 67 ರನ್ ಗಳಿಂದ ಮಣಿಸಿ ಭರ್ಜರಿ ಜಯ ಸಾಧಿಸಿತು.
ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಲೀಗ್ ನಲ್ಲಿ ಸತತ ಮೂರನೇ ಜಯ ದಾಖಲಿಸಿತು. ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್ ತಂಡವನ್ನು ಮಣಿಸಿದ್ದ ಪಡೆ, ಎರಡನೇ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು 30 ರನ್ಗಳಿಂದ ಸೋಲಿಸುತ್ತು. ಸದ್ಯ ಮೂರನೇ ಪಂದ್ಯದಲ್ಲಿ ಚೆನ್ನೈ ರೈನೋಸ್ ತಂಡದ ವಿರುದ್ಧ ಗೆಲುವು ಕಂಡಿದೆ. ಈ ಮೂಲಕ ಕರ್ನಾಟಕ ತಂಡದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಟಾಸ್ ಗೆದ್ದ ಚೆನ್ನೈ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಕರ್ನಾಟಕ ತಂಡ ಮೊದಲ 10 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 137 ರನ್ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಪ್ರದೀಪ್ ಹಾಗೂ ಕೃಷ್ಣ ಕೇವಲ 5 ಓವರ್ಗಳಲ್ಲಿ 90 ರನ್ ಕಲೆಹಾಕಿ ಉತ್ತಮ ಜೊತೆಯಾಟ ನೀಡಿತು. ಪ್ರದೀಪ್ ಕೇವಲ 33 ಎಸೆತಗಳಲ್ಲಿ 65 ರನ್ ಕಲೆಹಾಕಿದರೆ, ಸತತ ನಾಲ್ಕನೇ ಶತಕ ಸಿಡಿಸಿದ ಕೃಷ್ಣ ಕೇವಲ 24 ಎಸೆತಗಳಲ್ಲಿ 57 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಚೆನ್ನೈ ತಂಡ ಮೊದಲ 10 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 84 ರನ್ ಗಳಿಸಿತು. ಚೆನ್ನೈ ಪರ ವಿಕ್ರಾಂತ್ 19 ರನ್ ಗಳಿಸಿದರು. ಕರ್ನಾಟಕ ಪರ ಕರಣ್ ಹಾಗೂ ಕಾರ್ತಿಕ್ ತಲಾ 3 ವಿಕೆಟ್ ಪಡೆದರೆ, ಸುನೀಲ್ ಹಾಗೂ ಚಂದನ್ ತಲಾ ಒಂದೊಂದು ವಿಕೆಟ್ ಪಡೆದರು. ಕರಣ್ ಹ್ಯಾರ್ಟಿಕ್ ಸಂಪಾದಿಸಿದರು.
ಎರಡನೇ ಇನ್ನಿಂಗ್ಸ್ನಲ್ಲೂ ಅಬ್ಬರಿಸಿದ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ತಂಡದ ಮೊತ್ತ 201 ಆಗುವಂತೆ ಮಾಡಿದರು. ಗುರಿ ಬೆನ್ನಟ್ಟಿದ ಚೆನ್ನೈ ರೈನೋಸ್ ತಂಡ ನಿಗದಿತ 10 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿತು.