Tipu Sultan: ಟಿಪ್ಪು ನಮ್ಮ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾನೆ : ಕಲ್ಲಡ್ಕ ಪ್ರಭಾಕರ್ ಭಟ್

1 min read
CONROVESY

ಟಿಪ್ಪು ನಮ್ಮ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾನೆ : ಕಲ್ಲಡ್ಕ ಪ್ರಭಾಕರ್ ಭಟ್

ಉಡುಪಿ: ಟಿಪ್ಪು ನಮ್ಮ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾನೆ. ಇಂತಹವನ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ಉಡುಪಿಯ ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಅವನ ಹೆಸರಿನಲ್ಲಿ ದೇವಿಗೆ ಪೂಜೆ ಮಾಡಿದರೆ ಅದು ದೇವರಿಗೆ ಮಾಡುವ ಅಪಮಾನ. ಹಿಂದೂ ಸಮಾಜವನ್ನು ನಾಶ ಮಾಡಿದ್ದಾನೆ. ಇದರಿಂದ ದೇವರ ಶಕ್ತಿ ಕಡಿಮೆಯಾಗುತ್ತದೆ ಎಂದು ಕಿಡಿ ಕಾರಿದರು.

Tipu Sultan Saaksha Tv

 

ಅಲ್ಲದೇ ಸಲಾಂ ಹೆಸರನ್ನು ಎಷ್ಟು ಬೇಗ ತೆಗೆದು ಹಾಕುತ್ತಾರೋ ಅಷ್ಟು ಶ್ರೇಯಸ್ಸು. ಇಲ್ಲದಿದ್ದರೆ ದೇವರ ಶಕ್ತಿ ಕಡಿಮೆಯಾಗುತ್ತದೆ. ಶೀಘ್ರವಾಗಿ ಸಲಾಂ ತೆಗೆದು, ದೇವರ ಹೆಸರಿನಲ್ಲಿ ಪೂಜೆ ಮಾಡಲಿ. ಸಲಾಂ ಇನ್ನೂ ಸ್ವಲ್ಪ ವರ್ಷ ಕಳೆದರೆ, ಅಲ್ಲಾಹು ಸಲಾಂ ಎಂದು ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಮುಸ್ಲಿಂ ಅವರಲ್ಲಿ ಬೇಕಾದರೆ ಮಾಡಲಿ, ನಮ್ಮಲ್ಲಿ ಬೇಡ. ನಮ್ಮ ದೇವಸ್ಥಾನದಲ್ಲಿ ನಮ್ಮ ನಮ್ಮತನ ಇರಬೇಕು. ಹಿಂದೂ ದೇವರಿಗೆ ಇಂತಹ ಸಲಾಂ ಪೂಜೆ ನಡೆಯಬಾರದು ಎಂದು ಮಾತನಾಡಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd