Tollywood : “ಈ ಹೀರೋಗಳ ಸಿನಿಮಾಗಳಿಂದ ನನಗಾದ ನಷ್ಟ ಬೇರೆಯವರಿಗೆ ಆಗಿದ್ರೆ ಆತ್ಮಹತ್ಯೆ ಮಾಡಿಕೊಳ್ತಿದ್ರು” – ದಿಲ್ ರಾಜು
ಸ್ಟಾರ್ ನಿರ್ಮಾಪಕರಾದ ದಿಲ್ ರಾಜು ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಲ್ಲಿದ್ದಾರೆ.. ದಳಪತಿ ವಿಜಯ್ ವಾರಿಸು ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ.. ಈ ಸಿನಿಮಾದ ಪ್ರಚಾರದ ವೇಳೆ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಬಗ್ಗೆ ಅವರು ನೀಡಿದ್ದ ಹೇಳಿಕೆ ವಿವಾದ ಸೃಷ್ಟಿ ಮಾಡಿತ್ತು.. ಇದೀಗ ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ ನಟರ ಸಿನಿಮಾಗಳಿಂದ ತಾವು ಅನುಭವಿಸಿದ ನಷ್ಟದ ಬಗ್ಗೆ ಮಾತನಾಡಿದ್ದಾರೆ.
ವಾರಿಸು ಸಿನಿಮಾ ತೆಲುಗಿನಲ್ಲೂ ಬರುತ್ತಿದೆ.. ಸಂಕ್ರಾಂತಿ ಸಮಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.. ತೆಲುಗು ರಾಜ್ಯಗಳಲ್ಲಿ ಸಿನಿಮಾ ಅದ್ಧೂರಿ ರಿಲೀಸ್ ಗೆ ದಿಲ್ ರಾಜು ಸ್ಕೆಚ್ ಹಾಕಿದ್ದಾರೆ.. ಆದ್ರೆ ತೆಲುಗಿನ ಸ್ಟಾರ್ ನಟರಾದ ಚಿರಂಜೀವಿ, ಬಾಲಕೃಷ್ಣ ಚಿತ್ರಗಳಿಗೆ ಚಿತ್ರಮಂದಿರದ ತೊಂದರೆಯಾಗುತ್ತದೆ ಎಂದು ದಿಲ್ ರಾಜು ವಿರುದ್ಧ ತೆಲುಗು ನಿರ್ಮಾಪಕರ ಸಂಘ ಕಿಡಿಕಾರಿತ್ತು.
ಈ ವಿಚಾರವಾಗಿ ಸಂದರ್ಶನ ಒಂದರಲ್ಲಿ ಮಾತನಾಡಿರೋ ದಿಲ್ ರಾಜು , ಮಹೇಶ್ ಬಾಬು ನಟನೆಯ ಸ್ಪೈಡರ್ ಹಾಗೂ ಪವನ್ ಕಲ್ಯಾಣ್ ನಟನೆಯ ಅಜ್ಞಾತವಾಸಿ ಚಿತ್ರಗಳು ತನ್ನ ಸಿನಿ ವೃತ್ರಿ ಜೀವನದಲ್ಲಿಯೇ ಅತಿದೊಡ್ಡ ಹಣಕಾಸಿನ ನಷ್ಟವನ್ನು ಉಂಟುಮಾಡಿದವು ಎಂದು ಹೇಳಿಕೊಂಡಿದ್ದಾರೆ. 2017ರಲ್ಲಿ ತೆರೆಕಂಡಿದ್ದ ಮಹೇಶ್ ಬಾಬು ನಟನೆಯ ಸ್ಪೈಡರ್ ಚಿತ್ರದ ತೆಲುಗು ರಾಜ್ಯಗಳ ವಿತರಣೆಯನ್ನು ಮಾಡಿದ್ದ ದಿಲ್ ರಾಜು ಚಿತ್ರ ಹೀನಾಯ ಸೋಲು ಕಂಡ ಕಾರಣ ನಷ್ಟ ಅನುಭವಿಸಿದ್ದರು. ಇನ್ನು ನಂತರದ ವರ್ಷದಲ್ಲಿ ಬಿಡುಗಡೆಗೊಂಡ ಪವನ್ ಕಲ್ಯಾಣ್ ನಟನೆಯ ಬಹು ನಿರೀಕ್ಷಿತ ಚಿತ್ರ ಅಜ್ಞಾತವಾಸಿ ಸಹ ಮಕಾಡೆ ಮಲಗಿತ್ತು.
ಇನ್ನು ಈ ಚಿತ್ರಗಳಿಂದ ಉಂಟಾದ ನಷ್ಟ ತನಗಲ್ಲದೇ ಬೇರೆ ಯಾರಿಗಾದರೂ ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ತಿದ್ರು ಅಥವಾ ಚಿತ್ರರಂಗ ಬಿಟ್ಟು ಓಡಿ ಹೋಗ್ತಾ ಇದ್ರು ಎಂದು ದಿಲ್ ರಾಜು ಹೇಳಿಕೊಂಡಿದ್ದಾರೆ. ಆ ವರ್ಷ ತಾನು ಆರು ಚಿತ್ರಗಳನ್ನು ನಿರ್ಮಿಸಿ ಲಾಭ ಪಡೆದ ಕಾರಣ ಉಳಿದುಕೊಂಡೆ ಎಂದೂ ಸಹ ದಿಲ್ ರಾಜು ಹೇಳಿಕೊಂಡಿದ್ದಾರೆ.
Tollywood: “If the loss I suffered from these hero movies was for anyone else, I would have committed suicide” – Dil Raju