ಕೊರೊನಾ ಸ್ಫೋಟದ ಮಧ್ಯೆ ಮುಳ್ಳಯ್ಯನಗಿರಿಯತ್ತ ಪ್ರವಾಸಿಗರ ದಂಡು

1 min read
Mullayanagiri

ಕೊರೊನಾ ಸ್ಫೋಟದ ಮಧ್ಯೆ ಮುಳ್ಳಯ್ಯನಗಿರಿಯತ್ತ ಪ್ರವಾಸಿಗರ ದಂಡು

ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಸ್ಫೋಟಗೊಂಡಿದೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ.

ಕೊರೊನಾ ಬಗ್ಗೆ ಜನರು ನಿರ್ಲಕ್ಷ್ಯವಹಿಸದೇ ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಸರ್ಕಾರ ಮನವಿ ಮಾಡುತ್ತಿದೆ.

ಅಲ್ಲದೆ ಖಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ಕಾಪಾಡುಕೊಳ್ಳುವಂತೆ ಸೂಚಿಸಿದೆ.

ಆದ್ರೆ ಜನರು ಮಾತ್ರ ಕೊರೊನಾ ಎರಡನೇ ಅಲೆಯನ್ನ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಮುಳ್ಳಯ್ಯನಗಿರಿಯತ್ತ ಬರುತ್ತಿರುವ ಪ್ರವಾಸಿಗರು.

ಹೌದು..! ಇಂದು ಭಾನುವಾರದ ಹಿನ್ನೆಲೆ ಕಾಫಿನಾಡಿನ ಮುಳ್ಳಯ್ಯನಗಿರಿಯತ್ತ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

Mullayanagiri

ಆದ್ರೆ ಯಾರೊಬ್ಬರು ಕೋವಿಡ್ ನಿಯಮಗಳನ್ನ ಪಾಲನೆ ಮಾಡುತ್ತಿಲ್ಲ. ಪ್ರವಾಸಿಗರಲ್ಲಿ ಬಹುತೇಕರು ಮಾಸ್ಕ್ ಹಾಕದೇ ಪ್ರವಾಸಿ ತಾಣದಲ್ಲಿ ಎಂಜಾಯ್ ಮಾಡ್ತಿದ್ದಾರೆ.

ಮಾಸ್ಕ್ ಹಾಕದೇ ಓಡಾಡುತ್ತಿರೋ ಪ್ರವಾಸಿಗರ ವರ್ತನೆಗೆ ಸ್ಥಳೀಯರು ಹಾಗೂ ಕೆಲ ಪ್ರವಾಸಿಗರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರವಾಸಿಗರ ವರ್ತನೆಯಿಂದ ಬೇಸತ್ತಿರುವ ಸ್ಥಳೀಯರು ಮುಳ್ಳಯ್ಯನಗಿರಿಯಲ್ಲಿ ಅಧಿಕಾರಿಗಳು ಅಥವಾ ಪೊಲೀಸರನ್ನ ನೇಮಿಸಿದ್ರೆ ಭಯದಿಂದಾದ್ರು ಜನ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸುವಂತಾಗುತ್ತದೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd