ತೃತೀಯ ಲಿಂಗಿ ಸಮುದಾಯದ ಎಲ್ಲರಿಗೂ ಉಚಿತ ಲಸಿಕೆ..!
ಸಮಾನ ಲಸಿಕೆ ಲಭ್ಯವಾಗುವಂತಹ ಉದ್ದೇಶದಿಂದಾಗಿ ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್ ಸೇರಿ ಪರಿವರ್ತನ್ ಕಾ ಟೀಕಾ ಘೋಷಿಸಿದೆ. ಇದರ ಅನ್ವಯ ರಾಷ್ಟ್ರವ್ಯಾಪಿ ಮುಂದಿನ 6 ತಿಂಗಳಲ್ಲಿ ತೃತೀಯ ಲಿಂಗಿ ಸಮುದಾಯದ ಎಲ್ಲಾ ಸದಸ್ಯರಿಗೆ ಉಚಿತ ಲಸಿಕೆ ಒದಗಿಸಲು ಯೋಜಿಸಲಾಗಿದೆ.
ಕಿನೀರ್ ಅಪೊಲೊ ಹಾಸ್ಪಿಟಲ್ಸ್ ಮತ್ತು ಎನ್ಜಿಒಗಳ 200 ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸಲಿದ್ದು, ತಮ್ಮ ಪ್ರದೇಶದಲ್ಲಿನ ಆಯ್ದ ಲಸಿಕಾ ಶಿಬಿರದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.