ನಟಿ ತ್ರಿಷಾ (Trisha) ಮತ್ತೆ ಚಿರಂಜೀವಿ (Chiranjeevi) ಅವರ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಚಿತ್ರ ತಂಡವೇ ಈ ಕುರಿತು ಅಧಿಕೃತವಾಗಿ ಘೋಷಿಸಿದೆ.
ಸಂಕ್ರಾಂತಿ ಹಬ್ಬದ ದಿನದಂದು ವಿಶ್ವಂಭರ ಟೈಟಲ್ ಟೀಸರ್ (Title Teaser) ಮೂಲಕ ಸುಗ್ಗಿ ಸಂಭ್ರಮ ಹೆಚ್ಚಿಸಿತ್ತು. ಇದು ಚಿರಂಜೀವಿ ಅವರು ನಟಿಸುತ್ತಿರುವ 156ನೇ ಸಿನಿಮಾ ಆಗಿದ್ದು, ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾದ ನಂತರ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿಯಾಗಿದೆ. ಈ ಚಿತ್ರ ಅತ್ಯಂತ ದುಬಾರಿ ಸಿನಿಮಾ ಎನ್ನಲಾಗುತ್ತಿದ್ದು, ಇಲ್ಲಿಯವರೆ ಚಿರು ನಟಿಸಿದ್ದ ಎಲ್ಲ ಸಿನಿಮಾಗಿಂತಲೂ ಈ ಚಿತ್ರ ದುಬಾರಿ ಎನ್ನಲಾಗುತ್ತಿದೆ.
2025 ರ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ. ಸದ್ಯ ನಟಿ ತ್ರಿಷಾ ಹೆಸರು ಕೇಳಿ ಬರುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.