ನಟ ರಜನಿಕಾಂತ್ (Rajinikanth) ಅವರ ಪತ್ನಿ ಲತಾ (Lata) ಅವರಿಗೆ ಸಂಕಷ್ಟ ಶುರುವಾಗಿದ್ದು, ಕೋರ್ಟ್ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
2024 ಜನವರಿ 6ರೊಳಗೆ ಖುದ್ದಾಗಿ ಕೋರ್ಟ್ ಗೆ ಹಾಜರಾಗಬೇಕು ಎಂದು ಬೆಂಗಳೂರಿನ (Bangalore) 1ನೇ ಎಸಿಎಂಎಂ ನ್ಯಾಯಾಲಯ ಸೂಚಿಸಿದೆ. ಲತಾ ಅವರ ಮೇಲೆ ಜಾಮೀನು ರಹಿತ ಪ್ರಕರಣ ಆಗಿದ್ದರಿಂದ ಖುದ್ದಾಗಿ ಹಾಜರಾಗಬೇಕೆಂದು ವಕೀಲರು ಮನವಿ ಮಾಡಿದ್ದರು.
ಪುತ್ರಿ ಸೌಂದರ್ಯ ನಿರ್ದೇಶನದ ಕೊಚಾಡಿಯನ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ನೊಟೀಸ್ ನೀಡಲಾಗಿದೆ. ಕೊಚಾಡಿಯನ್ ಬಿಡುಗಡೆಗೆ ಸಂಬಂಧಿಸಿದಂತೆ ಎರಡು ಕಂಪೆನಿಗಳ ಜೊತೆ ಒಪ್ಪಂದವಾಗಿತ್ತು. ಮೀಡಿಯಾ ಒನ್ ಕಂಪನಿ ಲತಾ ಶ್ಯೂರಿಟಿ ನೀಡಿದ್ದರು. ಸಿನಿಮಾ ಲಾಸ್ ಆದ ಹಿನ್ನೆಲೆಯಲ್ಲಿ ನಷ್ಟ ತುಂಬಿ ಕೊಡುವಲ್ಲಿ ವಿಫಲವಾಗಿದ್ದರು. ಹೀಗಾಗಿ ದೂರು ದಾಖಲಾಗಿತ್ತು. ಹೀಗಾಗಿ ಅವರು ಕೋರ್ಟ್ ಗೆ ಬರುವುದು ಅನಿವಾರ್ಯವಾಗಿದೆ.