Tunisha Sharma : ತುನಿಶಾ ಶರ್ಮಾ ಆತ್ಮಹತ್ಯೆ ಸ್ಥಳಕ್ಕೆ ಫೋರೆನ್ಸಿಕ್ ತಂಡ ಭೇಟಿ…
ಹಿಂದಿ ಧಾರಾವಾಹಿ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಟೆಲಿವಿಸನ್ ಸೆಟ್ ಗೆ ಮುಂಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಟಿ ತುನಿಶಾ ಶರ್ಮಾ ನೇಣು ಹಾಕಿಕೊಳ್ಳಲು ಬಳಸಿದ ಕ್ರೇಪ್ ಬ್ಯಾಂಡೇಜ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಕಲಿನಾ ಲ್ಯಾಬ್ನ ಫೋರೆನ್ಸಿಕ್ ತಂಡ ಸೋಮವಾರ ಸೆಟ್ಗೆ ಭೇಟಿ ನೀಡಿದ್ದು, ಶವವಾಗಿ ಪತ್ತೆಯಾಗಿದ್ದ ಶನಿವಾರ ಧರಿಸಿದ್ದ ಬಟ್ಟೆ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತುನಿಶಾ ಶರ್ಮಾ ಅವರ ಸಹ-ನಟ ಶೀಜಾನ್ ಖಾನ್ ಅವರ ಮೊಬೈಲ್ ಫೋನ್ ಮತ್ತು ಘಟನೆಯ ದಿನದಂದು ಆ ವ್ಯಕ್ತಿ ಧರಿಸಿದ್ದ ಬಟ್ಟೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶನಿವಾರ ಸೆಟ್ನಲ್ಲಿದ್ದವರು ಸೇರಿದಂತೆ 16 ಮಂದಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಶರ್ಮಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಖಾನ್ (27) ಅವರನ್ನು ಭಾನುವಾರ ಬಂಧಿಸಲಾಗಿದೆ. ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ನಂತರ ತುನಿಶಾ, ಶೀಜಾನ್ ಖಾನ್ ಜೊತೆಗಿನ ಸಂಬಂಧದಿಂದ ಬೇರ್ಪಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Tunisha Sharma death: Forensic team visits TV show set, seizes actor’s clothes, other belongings