ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ಪ್ರಕಟಿಸಿದ ಕೇಂದ್ರ ಸರ್ಕಾರ bonus non gazetted Employees
ಹೊಸದಿಲ್ಲಿ, ಅಕ್ಟೋಬರ್22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು 2019-2020ರ ಗೆಜೆಟೆಡ್ ಅಲ್ಲದ ನೌಕರರಿಗೆ ಬೋನಸ್ ಅನ್ನು ಅನುಮೋದಿಸಿದೆ. bonus non gazetted Employees
ಈ ಬೋನಸ್ ಪ್ರಕಟಣೆಯಿಂದ 30 ಲಕ್ಷಕ್ಕೂ ಹೆಚ್ಚು ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಸರ್ಕಾರದ ವಾಣಿಜ್ಯ ಸಂಸ್ಥೆಗಳ ಉದ್ಯೋಗಿಗಳಿಗೆ ಲಾಭವಾಗಲಿದೆ.
ವಿಜಯಾದಶಮಿ ಮೊದಲು ನೇರ ಲಾಭ ವರ್ಗಾವಣೆಯ ಮೂಲಕ ಒಂದೇ ಕಂತಿನಲ್ಲಿ ಬೋನಸ್ ನೀಡಲಾಗುವುದು ಎಂದು ಜಾವಡೇಕರ್ ತಿಳಿಸಿದ್ದಾರೆ.
ಡಿಸೆಂಬರ್‌ನಲ್ಲಿ ಸ್ಥಗಿತಗೊಳ್ಳಲಿರುವ ಯಾಹೂ ಗ್ರೂಪ್ಸ್
ಬೋನಸ್ ಯಾರಿಗೆ ಸಿಗುತ್ತದೆ?
ಅಧಿಕೃತ ಕ್ಯಾಬಿನೆಟ್ ಹೇಳಿಕೆಯ ಪ್ರಕಾರ, ಕೇಂದ್ರ ಸರ್ಕಾರದ ವಾಣಿಜ್ಯ ಸಂಸ್ಥೆಗಳಾದ ರೈಲ್ವೆ, ಪೋಸ್ಟ್, ರಕ್ಷಣಾ, ಇಪಿಎಫ್‌ಒ, ಇಎಸ್‌ಐಸಿಗಳ 16.97 ಲಕ್ಷ ಗೆಜೆಟೆಡ್ ಅಲ್ಲದ ನೌಕರರಿಗೆ 2019-2020ನೇ ಸಾಲಿನ ಉತ್ಪಾದಕತೆ ಲಿಂಕ್ಡ್ ಬೋನಸ್ (ಪಿಎಲ್‌ಬಿ) ಪಾವತಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರಿಗೆ ಒದಗಿಸಲು ಪಿಎಲ್‌ಬಿ ಅಲ್ಲದ ಅಥವಾ ತಾತ್ಕಾಲಿಕ ಬೋನಸ್ ಅನ್ನು ಅನುಮೋದಿಸಲಾಗಿದೆ. ಇದರಿಂದ13.70 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು, ರೂ .946 ಕೋಟಿ ಆರ್ಥಿಕ ಲಾಭವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ