25 ಮಿಲಿಯನ್ ವೀವ್ಸ್ ಪಡೆದುಕೊಂಡ ಕಬ್ಜ
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ನಟನೆಯ ಆರ್ ಚಂದ್ರು ನಿರ್ದೇಶನದ ಸಿನಿಮಾ ಕಬ್ಜ.
ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆಸ್ಟ್ ರೋಲ್ ಪ್ಲೇ ಮಾಡಿದ್ದಾರೆ.
ಆರ್. ಚಂದ್ರಶೇಖರ್ ನಿರ್ಮಿಸುತ್ತಿರುವ ಈ ಸಿನಿಮಾ ಪಾನ್ ಇಂಡಿಯಾ ಲೆವೆಲ್ ನಲ್ಲಿ ಏಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಈ ಸಿನಿಮಾದ ಟೀಸರ್ ಅನ್ನು ರಾನಾ ರಿಲೀಸ್ ಮಾಡಿದರು. ಸದ್ಯ ಈ ಟೀಸರ್ ಯೂಟ್ಯೂಬ್ ನಲ್ಲಿ ದಾಖಲೆ ನಿರ್ಮಿಸಿದೆ.

ಪ್ರಸ್ತುತ ಈ ಸಿನಿಮಾದ ಟೀಸರ್ 25 ಮಿಲಿಯನ್ ವೀವ್ಯೂ ಪಡೆದುಕೊಂಡು ಮುನ್ನುಗ್ಗುತ್ತಿದೆ.
ಕಬ್ಜಾ ಆಕ್ಷನ್ ಥ್ರಿಲ್ಲರ್ ಮೂವಿಯಾಗಿದೆ. 1942 ರ ಬ್ಯಾಕ್ ಡ್ರಾಪ್ ನಲ್ಲಿ ಈ ಸಿನಿಮಾ ಸಾಗಲಿದೆ.
ಇದರಲ್ಲಿ ಪವರ್ ಫುಲ್ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ.
ಟೀಸರ್ ನೆಕ್ಟ್ಸ್ ಲೆವೆಲ್ ನಲ್ಲಿದೆ ಎಂದು ಫ್ಯಾನ್ಸ್, ಪ್ರೇಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.
ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದು, ಎಜೆ ಶೆಟ್ಟಿ ಕ್ಯಾಮೆರಾ ವರ್ಕ್ಸ್ ಇದೆ.