ಪ್ರೀತಿ ನಿರಾಕರಿಸಿದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್ ಗೆ ಬೆಂಕಿ ಇಟ್ಟಳು..! ಜೊತೆಯಲ್ಲಿದ್ದ 6 ಬೈಕ್ ಗಳು ಸುಟ್ಟು ಕರಕಲು..!
ಥೈಲ್ಯಾಂಡ್ : ಥೈಲ್ಯಾಂಡ್ ನಲ್ಲಿ 36 ವರ್ಷದ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರ ತನ್ನ ಜೊತೆಗಿರಲು ನಿರಾಕರಿಸಿದಕ್ಕೆ ಆತನ ದುಬಾರಿ ಬೈಕ್ ಗೆ ಬೆಂಕಿ ಹಚ್ಚಿದ್ದಾಳೆ.. ಈ ಮೂಲಕ ಆತನ ಮೇಲಿನ ಸಿಟ್ಟು ತೀರಿಸಿಕೊಂಡಿದ್ದು, ಈ ಸಂಬಂಧಿತ ಪೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.. ಮಹಿಳೆ ತನ್ನ ಪ್ರಿಯಕರನಿಗೆ 23 ಲಕ್ಷ ರೂ. ಮೌಲ್ಯದ ಟ್ರಯಂಫ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಳು. ಆದರೆ ಅವರಿಬ್ಬರ ನಡುವೆ ಬ್ರೇಕ್ ಆಪ್ ಆದ ನಂತರ ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬೈಕನ್ನೇ ಸುಟ್ಟುಹಾಕಿದ್ದಾಳೆ.
ಈ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕನೋಕ್ ವಾನ್ ಎಂಬ ಮಹಿಳೆ, ಡಬ್ಬವೊಂದರಲ್ಲಿ ತಂದಿದ್ದ ಇಂಧನವನ್ನು ಬೈಕ್ ಮೇಲೆ ಸುರಿದಿದ್ದಾಳೆ. ನಂತರ ಬೈಕ್ ಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಈ ಘಟನೆ ವೇಳೆ ತನ್ನ ಮಾಜಿ ಪ್ರಿಯಕರನ ಬೈಕ್ ಜೊತೆಯಲ್ಲಿಯೇ ನಿಲ್ಲಿಸಿದ್ದ ಇನ್ನೂ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸದೇ ಇರುವುದು ಸಮಾಧಾನಕರ ಸಂಗತಿಯಾಗಿದೆ.
ಹೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು – VIRAL
ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು..! VIDEO VIRAL