ಆಕ್ಸಿಜನ್ ಭರ್ತಿಗೆ ಕ್ಯೂನಲ್ಲಿ ನಿಂತಿದ್ದಾಗಲೇ ತಾಯಿ ಸಾವಿನ ಸುದ್ದಿ ತಿಳಿದು ಗೋಳಾಡಿದ ಮಗಳು

1 min read

ಆಕ್ಸಿಜನ್ ಭರ್ತಿಗೆ ಕ್ಯೂನಲ್ಲಿ ನಿಂತಿದ್ದಾಗಲೇ ತಾಯಿ ಸಾವಿನ ಸುದ್ದಿ ತಿಳಿದು ಗೋಳಾಡಿದ ಮಗಳು

ನವದೆಹಲಿ: ಆಕ್ಸಿಜನ್ ಭರ್ತಿಗೆ ಮಗಳು ಕ್ಯೂನಲ್ಲಿ ನಿಂತಿದ್ದ ವೇಳೆಯೇ ಆಸ್ಪತ್ರೆಯಲ್ಲಿದ್ದ ಆಕೆಯ ತಾಯಿ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ಮಗಳು ನಿಂತ ಜಾಗದಲ್ಲಿಯೇ ಕುಸಿದು ಬಿದ್ದು ಗೋಳಾಡಿದ್ದಾಳೆ. ಇಂತಹ ಮನಕಲಕುವ ಘಟನೆ ನಡೆದಿರೋದು ರಾಷ್ಟ್ರ ರಾಜದಾನಿ ದೆಹಲಿಯಲ್ಲಿ.

ಶ್ರುತಿ ಸಹಾ ಎಂಬಾಕೆ ತನ್ನ ತಾಯಿಗಾಗಿ ಆಕ್ಸಿಜನ್ ಮರುಭರ್ತಿ ಮಾಡಿಕೊಂಡು ಹೋಗಲು ಬಂದು ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಆಕ್ಸಿಜನ್ ಘಟಕದ ಬಾಗಿಲು ಇನ್ನೂ ತೆರೆದಿರಲಿಲ್ಲ. ಹೀಗಾಗಿ ಕಂಗಾಲಾದ ಮಹಿಳೆ ಬಾಗಿಲು ಬೇಗ ತೆಗೆಯುವಂತೆ ಕಾಲಿಗೆ ಬಿದ್ದು ಕೇಳಿಕೊಂಡಿದ್ದಾರೆ. ಆದರೆ ಪೋಲಿಸರು ಮತ್ತು ಭದ್ರತಾ ಸಿಬ್ಬಂದಿ ಆಕೆಯ ಮಾತನ್ನ ತಿರಸ್ಕರಿಸಿ ಕಾಯುವಂತೆ ಹೇಳಿದ್ದಾರೆ.

ಈ ವೇಳೆ ಮನೆಯವರು ಆಕೆಗೆ ಕಾಲ್ ಮಾಡಿ ಆಕ್ಸಿಜನ್ ಇಲ್ಲದೆ ತಾಯಿ ಪ್ರಾಣಬಿಟ್ಟ ಸುದ್ದಿ ತಿಳಿಸಿದ್ದಾರೆ. ಈ ವಿಚಾರ ಗೊತ್ತಾಗ್ತಿದ್ದಂತೆ  ಸಹಾ  ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಪ್ರಜ್ಞೆ ತಪ್ಪಿ ಕೆಲ ಹೊತ್ತಿನ ನಂತರ ಆಕೆ ಗೋಳಾಡುತ್ತಾ ಅಲ್ಲಿಂದ ಮನೆಗೆ ಓಡಿ ಹೋಗಿದ್ದಾರೆ.

‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ – ಸತೀಶ್ ನಿನಾಸಂ  

ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನ

ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ :  ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!

ಭಾರತಕ್ಕೆ ಸಹಾಯ ಮಾಡಿ ಎಂದು ಬೇಡಿಕೊಂಡ ಪ್ರಿಯಾಂಕಾ ಪತಿ ನಿಕ್ ಜೋನಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd