vivo pro kabaddi | ಇಂದಿನಿಂದ ರಾಜಧಾನಿಯಲ್ಲಿ ಪ್ರೊ ಕಬಡ್ಡಿ ಕಲರವ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಪ್ರೊ ಕಬಡ್ಡಿ ಮೇನಿಯಾ ಶುರುವಾಗಲಿದೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರೊ ಕಬಡ್ಡಿ 9 ನೇ ಸೀಸನ್ ಆರಂಭವಾಗುತ್ತಿದೆ.
ಕೊರೊನಾ ಸೋಂಕಿನಿಂದಾಗಿ ಪ್ರೊ ಕಬಡ್ಡಿ 8 ನೇ ಸೀಸನ್ ಅನ್ನು ಮುಚ್ಚಿದ ಸ್ಟೇಡಿಯಂನಲ್ಲಿ ನಡೆದಿತ್ತು.
ಇದೀಗ ಕೊರೊನಾ ಸೋಂಕು ತಗ್ಗಿದ್ದು, ಮೂರು ವರ್ಷಗಳ ಬಳಿಕ ವೀಕ್ಷಕರಿಗೆ ಪ್ರವೇಶ ಮುಕ್ತವಾಗುತ್ತಿದೆ.
ಈ ಬಾರಿಯ ಪಂದ್ಯಾವಳಿಗಳು ಬೆಂಗಳೂರು ಸೇರಿದಂತೆ ಮೂರು ಕೇಂದ್ರಗಳಲ್ಲಿ ನಡೆಯಲಿದೆ.
ಬೆಂಗಳೂರು, ಪುಣೆ ಮತ್ತು ಹೈದರಾಬಾದ್ ನಲ್ಲಿ ಪಂದ್ಯಾವಳಿಗಳು ನಡೆಯಲಿವೆ.

ಒಂದೇ ದಿನ ಮೂರು ಪಂದ್ಯಗಳು ಕೂಡ ಕೆಲದಿನಗಳಲ್ಲಿ ನಡೆಯಲಿದೆ.
ಮೊದಲ 41 ಪಂದ್ಯಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ.
ಆ ಬಳಿಕ ಪುಣೆ ನಂತರ ಹೈದರಾಬಾದ್ ಗೆ ಲೀಗ್ ಸ್ಥಳಾಂತರಗೊಳ್ಳಲಿದೆ.
ಲೀಗ್ ಬಳಿಕ ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ ಆಫ್ ಗೇರಿಲಿವೆ.
ಪ್ಲೇ ಆಫ್ ನಲ್ಲಿ 2 ಎಲಿಮಿನೇಟರ್, 2 ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕದ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ಜೈಪುರ್ ಪಿಂಕ್ ಫ್ಯಾಂಥರ್ಸ್, ಪುಣೇರಿ ಪಲ್ಟನ್, ಯು ಮುಂಬಾ, ಯೂಪಿ ಯೋಧಾ, ತಮಿಳ್ ತಲೈವಾಸ್, ಹರಿಯಾಣ ಸ್ಟೀಲರ್ಸ್, ದಬಾಂಗ್ ಡೆಲ್ಲಿ, ಪಾಟ್ನಾ ಪೈರೇಟ್ಸ್, ತೆಲುಗು ಟೈಟಾನ್ಸ್, ಗುಜಾರಾತ್ ಫಾರ್ಚೂನ್‍ಜೈಂಟ್ಸ್ ಸೇರಿ ಒಟ್ಟು 12 ತಂಡಗಳ ಈ ಬಾರಿ 9ನೇ ಸೀಸನ್ ಪ್ರಶಸ್ತಿಗಾಗಿ ಕಾದಾಡಲಿವೆ.
ಲೀಗ್ ಹಂತದ 132 ಪಂದ್ಯಗಳಿಗೆ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಆತಿಥ್ಯವಹಿಸಲಿದೆ.