ನಾಳೆ ಮತದಾನ : ಪೊಲೀಸ್ ಚಕ್ರವ್ಯೂಹದಲ್ಲಿ ರಾರಾ ಕ್ಷೇತ್ರ
ಬೆಂಗಳೂರು : ನಾಳೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ನಡೆಯಲಿದ್ದು, ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜೊತೆಗೆ ಮತದಾನದ ವೇಳೆ ಯಾರೇ ಅಹಿತಕರ ಘಟನೆ ನಡೆಸಲು ಮುಂದಾದ್ರೆ, ಅಂತವರನ್ನು ವಶಕ್ಕೆ ಪಡೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರನ್ನ ಸೆಳೆಯಲು ಕೆಲವರು ಈಗಾಗಲೇ ಹಣದ ಆಮಿಷವೊಡ್ಡಿದ್ದಾರೆ ಎಂಬ ಕೆಲವೊಂದು ವಿಡಿಯೋಗಳು ವೈರಲ್ ಆಗಿವೆ.
ಹೀಗಾಗಿ, ಇದರ ಬಗ್ಗೆ ಕೂಡ ನಾವು ಗಮನ ಹರಿಸಿದ್ದೇವೆ. ಸದ್ಯ 678 ಮತಗಟ್ಟೆಗಳು ಇದ್ದು, ಹೀಗಾಗಿ ಇದನ್ನು 141 ಲೋಕೇಷನ್ ಆಗಿ ಗುರುತಿಸಲಾಗಿದೆ. ಇದರಲ್ಲಿ 82 ಕ್ರಿಟಿಕಲ್ ಬೂತ್ ಗಳು, 596 ನಾರ್ಮಲ್ ಬೂತ್ ಗಳಿವೆ.
ಇದನ್ನೂ ಓದಿ : ನಾನು ಉಪೇಂದ್ರ `ಎ’ ಸಿನಿಮಾಹಾಗೆ ಸಸ್ಪೆನ್ಸ್ ಉಳ್ಳವನು : ಹೆಚ್.ನಾಗೇಶ್
ಪ್ರತಿ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬರು ಹೆಡ್ ಕಾನ್ ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್ ನಿಯೋಜನೆ ಮಾಡಲಾಗಿದ್ದು, ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬರು ಕಾನ್ ಸ್ಟೇಬಲ್, ಒಬ್ಬರು ಹೋಂಗಾರ್ಡ್‍ನ್ನು ಹಾಕಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದಾದ್ಯಂತ ಭದ್ರತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 2563 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಡಿಸಿಪಿ, 08 ಎಸಿಪಿ, 30 ಇನ್ ಸ್ಪೆಕ್ಟರ್ ಗಳು, 94 ಪಿಎಸ್‍ಐ, 185 ಎಎಸ್‍ಐ, 1547 ಕಾನ್ ಸ್ಟೆಬಲ್ ಗಳು, 699 ಹೋಂಗಾರ್ಡ್ ಗಳನ್ನು ನಿಯೋಜನೆ ಮಾಡಲಾಗಿದೆ.
ಉಳಿದಂತೆ 40 ಫ್ಲೇಯಿಂಗ್ ಸ್ಕ್ವಾಡ್ ಗಳು, 02 ಕಂಪನಿ ಸಿಐಎಎಸ್‍ಎಫ್, ಒಂದು ಕಂಪನಿ ಕೇರಳ ರಾಜ್ಯ ಸಶಸ್ತ್ರ ಮೀಸಲು ಪಡೆ, 19 ಕೆಎಸ್ ಆರ್‍ಪಿ ಹಾಗೂ 20 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 91 ಚಿತಾ ಹಾಗೂ 32 ಹೊಯ್ಸಳ ವಾಹನಗಳನ್ನು ಸಹ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ : ಉಮಾಶ್ರೀ ಬಾಗಲಕೋಟೆ ಮನೆಗೆ ಕನ್ನ ಹಾಕಿದ ಖದೀಮರು..!
ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮಸ್ಟರಿಂಗ್ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಕೇಂದ್ರದ ಸುತ್ತಮುತ್ತ ಪೊಲೀಸ್ ಚಕ್ರವ್ಯೂಹ ಏರ್ಪಡಿಸಲಾಗಿದೆ. ಮಸ್ಟರಿಂಗ್ ಕೇಂದ್ರದ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel