ಖ್ಯಾತ ಗಾಯಕಿ ಮಂಗ್ಲಿಗೆ ಅಪಘಾತವಾಗಿರುವ ಕುರಿತು ವದಂತಿ ಹಬ್ಬಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಅಪಘಾತ ನಡೆದ ದಿನಾಂಕ ಮತ್ತು ಅಪಘಾತದ ತೀವ್ರತೆ ಕುರಿತು ತಪ್ಪು ಮಾಹಿತಿ ಹಬ್ಬಿದೆ. ನಾನು ಸುರಕ್ಷಿತವಾಗಿದ್ದೇನೆ. ಅದು ಎರಡು ದಿನಗಳ ಹಿಂದೆ ನಡೆದ ಒಂದು ಚಿಕ್ಕ ಅಪಘಾತ. ವದಂತಿ ನಂಬಬೇಡಿ. ನಿಮ್ಮ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.
ಮಂಗ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಪೋಸ್ಟ್ ನೋಡಿದ ನಂತರ ಅಭಿಮಾನಿಗಳಿ ತುಂಬಾ ಸಂತಸವಾಗಿದ್ದು, ಆರೋಗ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಪಡಿಸಿದ್ದಾರೆ. ಮಾರ್ಚ್ 17ರ ರಾತ್ರಿಯೇ ಮಂಗ್ಲಿ ಕಾರು ಅಪಘಾತವಾಗಿದೆ. ಆದರೆ ಆ ಮಾಹಿತಿ ನಿಜವಲ್ಲ ಎಂದು ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ‘ರಂಗಾ ರೆಡ್ಡಿ ಜಿಲ್ಲೆಯ ನಂದಿಗ್ರಾಮದ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಗಾಯಕಿ ಮಂಗ್ಲಿ ಭಾಗವಹಿಸಿದ್ದರು. ಮರಳಿ ಹೈದರಾಬಾದ್ ಗೆ ಬರುತ್ತಿದ್ದಾಗ ಶಂಶಾಬಾದ್ ತೊಂಡುಪಲ್ಲಿ ಸಮೀಪ ಅವರ ಕಾರು ಅಪಘಾತಕ್ಕೆ ಒಳಗಾಯಿತು. ಕಾರಿಗೆ ಟ್ರಕ್ ಗುದ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸದ್ಯ ಇದಕ್ಕೆ ಮಂಗ್ಲಿ ಸ್ಪಷ್ಟನೆ ನೀಡಿದ್ದಾರೆ.