ಸಿದ್ಲಿಂಗು ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಹಾಗೂ ನಟಿ ರಮ್ಯಾ ನಟಿಸಿದ್ದರು. ಈ ಚಿತ್ರ ಹಿಟ್ ಆಗಿತ್ತು. ಸದ್ಯ ಸಿದ್ಲಿಂಗು 2 ಚಿತ್ರೀಕರಣಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಮುಂದಾಗಿದ್ದಾರೆ.
ಆದರೆ, ಈ ಚಿತ್ರದಲ್ಲಿ ನಟಿ ರಮ್ಯಾ ಬದಲು ಸೋನು ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಮಾತನಾಡಿರುವ ಸೋನು, ನಾನು ರಮ್ಯಾ ಮಾಡಿದ ಪಾತ್ರದಲ್ಲಿ ನಟಿಸುತ್ತಿಲ್ಲ. ಆ ಪಾತ್ರವೇ ಬೇರೆ, ನಾನು ಮಾಡುತ್ತಿರುವ ಪಾತ್ರವೇ ಬೇರೆ ಎಂದು ಹೇಳಿದ್ದಾರೆ.
ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆಯಿತು. ಚಿತ್ರದ ನಾಯಕ ನಟ ಯೋಗಿ, ನಾಯಕಿ ಸೋನು ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಹೀಗಾಗಿ ಸಿದ್ಲಿಂಗು 2 ಚಿತ್ರ ಯಾವ ರೀತಿ ಆರಂಭವಾಗಲಿದೆ ಎಂಬುವುದು ಚಿತ್ರದ ಕುತೂಹಲವಾಗಿದೆ.
ಮೊದಲ ಬಾರಿಗೆ ಈ ಚಿತ್ರದಲ್ಲಿ ರಮ್ಯಾ ನಟಿಸಿದ್ದರಿಂದಾಗಿ ಸಿನಿಮಾ ಯಶಸ್ವಿಯಾಗಿತ್ತು. ಹನ್ನೆರಡು ವರ್ಷಗಳ ನಂತರ ವಿಜಯ್ ಪ್ರಸಾದ್ ಅದೇ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಯಾವ ಕಥೆ ಹೊಂದಿರಲಿದೆ ಎಂಬುವುದು ಅಭಿಮಾನಿಗಳ ಕಾತುರವಾಗಿದೆ.