ನಟಿ ತ್ರಿಶಾ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ವ್ಯಾಲೆಂಟೈನ್ ದಿನದಂದು ಸಖತ್ ಸುದ್ದಿಯಾಗಿದ್ದಾರೆ. ಅಂದು ಅವರು ಗುಲಾಬಿ ಗೊಂಚಲು ಹಿಡಿದಿದ್ದು, ಸದ್ದಿಲ್ಲದೇ ಎಂಗೇಜ್ ಆದರಾ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ.
40ರ ವರ್ಷದ ನಟಿ ತ್ರಿಶಾ, ಟಾಪ್ ನಟರಿಗೆ ನಾಯಕಿಯಾಗುವ ಮೂಲಕ ಬ್ಯೂಸಿಯಾಗಿದ್ದಾರೆ. ಇದರ ಪರ್ಸನಲ್ ಲೈಫ್ನಲ್ಲಿ ನಟಿ ಕಮೀಟ್ ಆಗಿದ್ದಾರಾ? ಎಂದು ತ್ರಿಶಾ ಬಗ್ಗೆ ಚರ್ಚೆ ಶುರುವಾಗಿದೆ. ಪ್ರೇಮಿಗಳ ದಿನ ಒಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದರು. ಈ ಪೋಸ್ಟ್ನಲ್ಲಿ ಅಂತೂ ಈ ದಿನ ಹೀಗೆ ಕಳೆಯಿತು ಎಂದು ಕ್ಯಾಪ್ಷನ್ ಬರೆದು ನಟಿ ಕೆಲವೊಂದು ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ತಿಳಿ ಗುಲಾಬಿ ಬಣ್ಣದ ರೋಸ್ ಬೊಕ್ಕೆ ಕೂಡಾ ಹಿಡಿದುಕೊಂಡಿದ್ದರು. ಹೂಗಳಿಗೆ ಮುಖ ತಾಗಿಸಿ ನಟಿ ಫುಲ್ ಜೂಮ್ನಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಮುದ್ದಾಗಿ ಕಾಣಿಸಿದ್ದಾರೆ.
ಸದ್ಯ ನಟಿಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.