Kodagu: ಹುಲಿಯ ಅಟ್ಟಹಾಸಕ್ಕೆ 28 ವರ್ಷದ ಕಾರ್ಮಿಕ ಬಲಿ | ಬೀದಿಗೆ ಬಂದ ಕುಟುಂಬ

1 min read
Kodagu Saaksha Tv

ಹುಲಿಯ ಅಟ್ಟಹಾಸಕ್ಕೆ 28 ವರ್ಷದ ಕಾರ್ಮಿಕ ಬಲಿ | ಬೀದಿಗೆ ಬಂದ ಕುಟುಂಬ

ಕೊಡಗು : ಹುಲಿ ದಾಳಿಯಿಂದ ಬಲಿಯಾದ ಕಾರ್ಮಿಕ ಕುಟಂಬ ಬೀದಿಗೆ ಬಂದಿದೆ, ತುತ್ತು ಅನ್ನಕ್ಕೂ ಪರದಾಡುತ್ತಿದ್ದು, ಇಬ್ಬರು ಮಕ್ಕಳಿದ್ದು ಮನೆಯಲ್ಲಿ ಊಟಕ್ಕೆ ಗತಿ ಇಲ್ಲ ಎಂದು ಪತಿ ಕಳೆದುಕೊಂಡ ಪತ್ನಿ ಆರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಮುಂದೆ ಗೋಳಾಡಿದ್ದಾರೆ.

ಕೊಡಗು ಜಿಲ್ಲೆಯ ವೀರಾಜ್​ಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ನರಭಕ್ಷಕ ಹುಲಿಯ ಅಟ್ಟಹಾಸಕ್ಕೆ 28 ವರ್ಷದ ಕಾರ್ಮಿಕ ಗಣೇಶ್ ಬಲಿಯಾಗಿದ್ದರು. ಗಣೇಶ ಕುಟುಂಬಕ್ಕೆ ಇಂದು ಭಾನುವಾರ ಸಚಿವರು ಭೇಟಿ ನೀಡಿದಾಗ  ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ.

ಆದರೆ ಚೆಕ್​ನಿಂದ ಹಣ ಪಡೆಯಲು ನನ್ನ ಬಳಿ ಅಕೌಂಟ್ ಇಲ್ಲ. ಆಧಾರ್ ಕಾರ್ಡ್ ಹಾಗೂ ಇರಲು ಸ್ವಂತ ಮನೆಯಿಲ್ಲ. ನನಗೆ ಇಬ್ಬರು ಮಕ್ಕಳು ಇದ್ದಾರೆ ಅವರ ಗತಿ ಏನು?, ನಮ್ಮ ಕಷ್ಟ ಕೇಳಲು ಯಾರು ಬರುತ್ತಿಲ್ಲ ಎಂದು ಮಹಿಳೆ ಸಚಿವರ ಮುಂದೆ ಕಣ್ಣೀರು ಹಾಕಿದ್ದಾರೆ.

ಮಹಿಳೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ನಿಮ್ಮ ಕಷ್ಟಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಸೂಕ್ತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd